ಮುಲ್ಕಿ: ಇಲ್ಲಿಗೆ ಸಮೀಪದ ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲಕಾಡಿ ಬಳಿ ಕೇವಲ ಒಂದು ಮನೆಗೋಸ್ಕರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯ ಉದ್ಯಮಿಯೊಬ್ಬ ಕೊಲಕಾಡಿಯ ಕುಂಜಾರುಗಿರಿ ದೇವಸ್ಥಾನದ ಬಳಿ ಬಳಿ ಶಾಸಕ ಉಮನಾಥ್ ಕೋಟ್ಯಾನ್ ಹಾಗೂ ಸಚಿವ ಶ್ರೀನಿವಾಸ್ ಪೂಜಾರಿ ರವರಿಗೆ ದುಂಬಾಲು ಬಿದ್ದು ರಸ್ತೆ ನಿರ್ಮಾಣ ಮಾಡಿ ಸರಕಾರದ ಲಕ್ಷಾಂತರ ರೂಪಾಯಿ ಪೋಲು ಮಾಡಿದ್ದಾರೆ.
ಈ ಬಗ್ಗೆ ಶಾಸಕರಿಗೆ ಅನೇಕ ಬಾರಿ ಸ್ಥಳೀಯರು ದೂರು ನೀಡಿದ್ದರೂ ಶಾಸಕ ಉಮಾನಾಥ ಕೋಟ್ಯಾನ್ ಉದ್ಯಮಿಯ ಬೆಂಬಲಕ್ಕೆ ನಿಂತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಡಾಮರೀಕರಣಗೊಳ್ಳದೆ ಇರುವ ಅನೇಕ ರಸ್ತೆಗಳಿದ್ದು ಅವುಗಳನ್ನು ದುರಸ್ತಿ ಪಡಿಸದೆ ಕೇವಲ ಓರ್ವ ವ್ಯಕ್ತಿಯ ಹಿತಕ್ಕಾಗಿ ರಸ್ತೆ ನಿರ್ಮಿಸಿದ ಶಾಸಕರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಕೆಂಡಮಂಡಲವಾಗಿದ್ದು ಪ್ರತಿಭಟನೆಗೆ ಸಜ್ಜಾಗಿದ್ದಾರೆ.
Kshetra Samachara
05/10/2022 08:18 pm