ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: PFI ಬೇರೆ ರೂಪದಲ್ಲಿ ಬರಬಹುದು, ಹಿಂದೂ ಸಮಾಜ ಜಾಗೃತವಾಗಿರಬೇಕು; ಮುತಾಲಿಕ್

ಪಿಎಫ್‌ಐ ಎಂಬ ರಾಕ್ಷಸಿ ಶಕ್ತಿ ದೇಶದ್ರೋಹಿ ಕ್ಯಾನ್ಸರ್ ಆಗಿತ್ತು. ಈ ಶಕ್ತಿಗೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಏಟು ಕೊಟ್ಟಿದೆ. ಆದರೆ ಆಂತರಿಕವಾಗಿ ದೇಶದ್ರೋಹಿ ಕಂಟಕ ಇನ್ನೂ ಇದೆ. ದೇಶದ ಎಲ್ಲಾ ಹಿಂದೂ ಸಂಘಟನೆಗಳು ಅಲರ್ಟ್ ಇರಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ,ಹಿಂದೂ ಸಂಘಟನೆಗಳು ಸಮಾಜವನ್ನು ಜಾಗೃತ ಮಾಡುವ ಕೆಲಸ ಮಾಡುತ್ತಲೇ ಇವೆ. ಯಾವಾಗ ಆಂತರಿಕ ಆಘಾತವಾಗುತ್ತೋ ಗೊತ್ತಿಲ್ಲ. ಪಿಎಫ್‌ಐನ ಇಂತಿಫಿದಾ ಎಂಬುದು ಆಘಾತಕಾರಿ ಸಂದೇಶ. ಅವರ ಸಾಮಾಜಿಕ ಜಾಲತಾಣದ ಸಂದೇಶವನ್ನು ನಿರ್ಲಕ್ಷಿಸಬಾರದು.

ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಬೇರೆ ಬೇರೆ ರೂಪದಲ್ಲಿ ಹೊರಬರುವ ಸಿದ್ಧತೆ ಮಾಡಿದ್ದಾರೆ ಎಂದು ಹೇಳಿದರು. ದೇಶದೊಳಗೆ ಇಂದಲ್ಲ ನಾಳೆ ಆಂತರಿಕ ಯುದ್ಧ ಆಗುತ್ತದೆ, ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದ ಮುತಾಲಿಕ್, ಹಿಂದುಗಳು ಮತ್ತು ಇಸ್ಲಾಮಿಕ್ ಶಕ್ತಿಗಳ ನಡುವೆ ಸಂಘರ್ಷ ಆಗುತ್ತದೆ. ಆಂತರಿಕವಾಗಿ ಅವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಹಿಜಾಬ್ ಬೆಂಬಲಿಸಿ ಬಂದ್ ಮಾಡಿದಾಗ ಏಕತೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹಿಂದೂ ಸಮಾಜ ಧರ್ಮ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಹೇಳಿದ್ದಾರೆ.

Edited By :
PublicNext

PublicNext

03/10/2022 09:00 pm

Cinque Terre

52.01 K

Cinque Terre

22

ಸಂಬಂಧಿತ ಸುದ್ದಿ