ಕುಂದಾಪುರ: ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣ ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಕ್ಕೆ ಒಳಪಟ್ಟಿರುವ ಕುಂಭಶ್ರೀ ಶ್ರೀ ನಾಗಾಚಲ ಅಯ್ಯಪ್ಪಸ್ವಾಮಿ ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ನಡೆಯುವ ನವರಾತ್ರಿ ಉತ್ಸವಕ್ಕೆ ವೇದಮೂರ್ತಿ ಲೋಕೇಶ್ ಅಡಿಗ ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀ ಶಾರದಾ ಪೀಠ ಶೃಂಗೇರಿ
ಇಂದು ನಡೆಯುವ ದೇವಳದ ಎಲ್ಲಾ ಕಾರ್ಯಕ್ಕೂ ಚಾಲನೆ ನೀಡಿ ನವರಾತ್ರಿಯ ಅಂಗವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ಪ್ರತಿದಿನ ನವರಾತ್ರಿ ಉತ್ಸವ ,ಚಂಡಿಕಾ ಹೋಮ ,ಸಪ್ತಶತೀ ಪಾರಾಯಣ,ಕಲ್ಪೋಕ್ತ ಪೂಜೆ, ಅಷ್ಟಾವಧಾನ ಸೇವೆ , ನಡೆಯುತ್ತಿದೆ
ಸತತ ಒಂಬತ್ತು ದಿನ ನಡೆಯುವ ಚಂಡಿಕ ಯಾಗಕ್ಕೆ ಭಕ್ತಾದಿಗಳು ಸಪರಿವಾರ ಸಮೇತರಾಗಿ ಆಗಮಿಸಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಈ ಮೂಲಕ ಹೇಳಿದರು.
ದೇವಳದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಪೂಜಾವಿಧಿ ವಿಧಾನಗಳು ನೆರವೇರಿದವು.
Kshetra Samachara
28/09/2022 12:05 pm