ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉಡುಪಿ - ದ.ಕ. ಜಿಲ್ಲೆಗಳ ಯಾವುದೇ ರೀತಿಯ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ನೀಡಿ; ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್

ಸಾರ್ವಜನಿಕರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಯಾವುದೇ ರೀತಿಯ ಭ್ರಷ್ಟಾಚಾರದ ದೂರ‌ನ್ನು ಲೋಕಾಯುಕ್ತಕ್ಕೆ ನೀಡಬಹುದು ಎಂದು ಮಂಗಳೂರು - ಉಡುಪಿ ವಿಭಾಗದ ಲೋಕಾಯುಕ್ತ ನೂತನ ಎಸ್ಪಿ ಲಕ್ಷ್ಮೀ ಗಣೇಶ್ ಹೇಳಿದರು.

ನಗರದ ಉರ್ವಸ್ಟೋರ್ ನಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ 2022ರ ಸೆ.9ರಿಂದ ಲೋಕಾಯುಕ್ತವನ್ನು ಮತ್ತಷ್ಟು ಬಲಪಡಿಸಿದೆ. ಪೊಲೀಸ್ ಠಾಣೆಗೆ ಅಧಿಕಾರವನ್ನು ನೀಡಿದೆ‌. ಸರಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅಥವಾ ತಮ್ಮ ಗಳಿಕೆಗಳಿಗಿಂತಲೂ ಆಸ್ತಿ‌ ಮಾಡಿದ್ದರೆ ಆ ಬಗ್ಗೆ ಸಾರ್ವಜನಿಕರು ದೂರು ನೀಡಬಹುದು. ಕೆಲಸ ಮಾಡಿಸಿಕೊಳ್ಳಲು ಲಂಚ ಕೇಳುತ್ತಿದ್ದರೆ ಜಿಪಂ ನಿಂದ ಹಿಡಿದು ಜಿಲ್ಲಾಧಿಕಾರಿಗಳವರ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ. ಎಸಿಬಿಗಿಂತ ಮೊದಲು ಇದ್ದ ಮಂಗಳೂರು ವಿಭಾಗದ ಲೋಕಾಯುಕ್ತದಲ್ಲಿ 12 ಪ್ರಕರಣದಲ್ಲಿ ಶಿಕ್ಷೆಯಾಗಿದೆ ಎಂದು ಹೇಳಿದರು.

ಈಗಾಗಲೇ ಎಸಿಬಿಯಲ್ಲಿದ್ದ ಹಳೆಯ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗುತ್ತದೆ‌. ಮಂಗಳೂರು ವಿಭಾಗದಲ್ಲಿ ಎರಡು ಡಿವೈಎಸ್ಪಿ, ಒಂದು ಇನ್ ಸ್ಪೆಕ್ಟರ್ ಹುದ್ದೆ ಇದೆ. ಒಂದು ಇನ್ ಸ್ಪೆಕ್ಟರ್, ಆರು ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳು ಖಾಲಿ ಇದೆ. ಉಡುಪಿ ವಿಭಾಗದಲ್ಲಿ ಒಂದು ಡಿವೈಎಸ್ಪಿ, ಒಂದು ಇನ್ ಸ್ಪೆಕ್ಟರ್ ಹುದ್ದೆ ಇದೆ. ಒಂದು ಇನ್ ಸ್ಪೆಕ್ಟರ್ ಹುದ್ದೆ ಖಾಲಿ ಇದೆ. ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುತ್ತದೆ‌ ಎಂದರು.

Edited By :
PublicNext

PublicNext

26/09/2022 04:48 pm

Cinque Terre

43.16 K

Cinque Terre

3

ಸಂಬಂಧಿತ ಸುದ್ದಿ