ಬೈಂದೂರು: ಮೋದಿ ಜನ್ಮದಿನಾಚರಣೆ ಅಂಗವಾಗಿ ಸೇವಾ ಪಾಕ್ಷಿಕ ಉಚಿತ ಆರೋಗ್ಯ ಶಿಬಿರ.ಬೈಂದೂರು: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಸೇವಾ ಚಟುವಟಿಕೆ ನಡೆಯುತ್ತಿದೆ. ಅಂತೆಯೇ ಬೈಂದೂರು ಮಂಡಲ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಶಿಬಿರವನ್ನು ಬೈಂದೂರು ಶಾಸಕ ಬಿ ಎಮ್ ಸುಕುಮಾರ್ ಶೆಟ್ಟಿ ಯವರು ಇಂದು ಶಿಬಿರವನ್ನು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿ ಈ ಹಿಂದೆ ಗಂಗೊಳ್ಳಿ ಗ್ರಾಮಪಂಚಾಯತ್ ಆಗಿದ್ದು ಗಂಗೊಳ್ಳಿಯಲ್ಲಿ ಜನಸಂಖ್ಯೆ ಹಾಗೂ ಮೀನುಗಾರಿಕೆ ವೈವಾಟು ಹೆಚ್ಚಿರುವುದರಿಂದ ಇಲ್ಲಿನ ಜನರ ಸಮಸ್ಯೆ ಹೆಚ್ಚು ಹೆಚ್ಚು ಬಗೆಹರಿಸಲು ಹಾಗೂ ಹೆಚ್ಚಿನ ಅಭಿವೃದ್ಧಿ ಮಾಡಲು ನನ್ನ ಅಧಿಕಾರ ಅವಧಿಯಲ್ಲಿ ಪರಿಪೂರ್ಣವಾಗಿ ಇಂದು ಪಟ್ಟಣ ಪಂಚಾಯತ್ ಆಗಿದೆ .
ಮುಂದಿನ ದಿನದಲ್ಲಿ ಈ ಆಸ್ಪತ್ರೆಯನ್ನು ತಾಲೂಕು ಮಟ್ಟದ ರೀತಿಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಹಾಗೂ ಎಲ್ಲಾ ರೀತಿಯ ರೋಗಿಗಳಿಗೆ ಒಂದೇ ಸೂರಿನಡಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಶಿಬಿರದಲ್ಲಿ100 ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿಮಂಡಲ ಕ್ಷೇತ್ರಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಜಡ್ಡು ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯಶಸ್ವಿನಿ ಗಂಗೊಳ್ಳಿ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ ಹಾಗೂ ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಗಂಗೊಳ್ಳಿ ಸಾರ್ವಜನಿಕರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
24/09/2022 02:53 pm