ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:"ಮಾನವ ವಿಕಾಸದಲ್ಲಿ ಭಾಷೆಗಳ ಪಾತ್ರ ಮಹತ್ತರ"

ಕಟೀಲು: ಮಾನವ ವಿಕಾಸದಲ್ಲಿ ಭಾಷೆಗಳ ಪಾತ್ರ ಮಹತ್ತರವಾಗಿದ್ದು . ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಬದುಕನ್ನು ರೂಪಿಸುವಲ್ಲಿ ಪ್ರತಿಯೊಂದು ಭಾಷೆಯೂ ಕೊಡುಗೆಯನ್ನು ನೀಡಿದೆ. ಭಾಷೆ ಎನ್ನುವುದು ಜನ ಜೀವನದ ವ್ಯವಸ್ಥೆಯಾಗಿದ್ದು ಜಗತ್ತಿನ ಸಮುದಾಯ ಭಾಷಾ ಸಂಗೋಪನೆಯಿಂದ ಸಂಸ್ಕೃತಿಯನ್ನು ಬೆಳೆಸುತ್ತಿದೆಯೆಂದು ಇತಿಹಾಸ ಉಪನ್ಯಾಸಕರಾದ ಸುರೇಶ್ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರಗಿದ ಹಿಂದಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ..ಕೃಷ್ಣ ವಹಿಸಿದ್ದರು.ಕಾರ್ಯಕ್ರಮದ ಅಂಗವಾಗಿ ನಡೆಸಿದ ಸಾಹಿತ್ಯಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಹಿಂದಿ ಉಪನ್ಯಾಸಕಿ ಡಾ.ಸುನೀತಾಎಚ್.ಬಿ. ಸ್ವಾಗತಿಸಿದರು. ಕುಮಾರಿ ವಿಜೇತಾ ಪ್ರಥಮಬಿ.ಕಾಂ. ಕಾರ್ಯಕ್ರಮ ನಿರೂಪಿಸಿದರು. ರಘುರಾಮ್ ಪ್ರಥಮಬಿ.ಕಾಂ. ವಂದಿಸಿದರು.

Edited By : PublicNext Desk
Kshetra Samachara

Kshetra Samachara

23/09/2022 08:26 pm

Cinque Terre

2.3 K

Cinque Terre

0