ಬೆಡ್ ತಯಾರಿಕಾ ಗೋಡೌನ್ ಹಾಗೂ ತರಕಾರಿ ಅಂಗಡಿಗೆ ಬೆಂಕಿ ಬಿದ್ದ ಘಟನೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.
ಜನಾರ್ದನ ದೇವಸ್ಥಾನದ ದ್ವಾರದ ಪಕ್ಕದಲ್ಲಿರುವ ಯು.ಎ ಹಮೀದ್ ಎಂಬುವವರಿಗೆ ಸೇರಿದ ಬೆಡ್ ಮಾರ್ಟ್‌ನಲ್ಲಿ ಇಂದು ಬೆಂಕಿ ತಗುಲಿದೆ. ಈ ವೇಳೆ ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದ್ದು ನಂತರ ಎರಡು ಅಗ್ನಿಶಾಮಕ ದಳ ಬಂದು ಬೆಂಕಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ವಾಹನಗಳು ಹಾಗೂ ಸಾರ್ವಜನಿಕರು ಸೇರಿದ ವೇಳೆ ಸಂಚಾರಕ್ಕೆ ಅಡಚಣೆಯಾಯ್ತು. ತಕ್ಷಣ ಸ್ಥಳಕ್ಕೆ ಬಂದ ಬೆಳ್ತಂಗಡಿ ಪೊಲೀಸರು ಹಾಗೂ ಸಂಚಾರಿ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಿದರು.
PublicNext
20/09/2022 06:36 pm