ಮೊಂಟೆಪದವು ಮರಿಕ್ಕಳ ಜುಮಾ ಮಸೀದಿಯಲ್ಲಿ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಎರಡನೇ ಆಂಡ್ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಸೆ.21 ರಿಂದ 25 ರ ವರೆಗೆ ಜರುಗಲಿದೆ ಎಂದು ಮಸೀದಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಹೇಳಿದರು.
ಮರಿಕ್ಕಳ ಜುಮಾ ಮಸೀದಿಯಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಸೆ. 21 ರಂದು ಮರಿಕ್ಕಳ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ಬಾಸ್ ಕೊಡಂಚಿಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 7 ಕ್ಕೆ ಉದ್ಘಾಟನಾ ಸಮಾರಂಭ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಜರುಗಲಿದೆ. 8ಕ್ಕೆ ಸಯ್ಯದ್ ತ್ವಾಹಾ ತಂಞಳ್ ಪೂಕೋಟೂರು ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ.
ಸೆ. 23 ರಂದು ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಮುಖ್ಯಪ್ರಭಾಷಣ ಹಾಗೂ ರಫೀಕ್ ಸ ಅದಿ ದೇಲಂಪಾಡಿ ಪ್ರಭಾಷಣಗೈಯ್ಯಲಿದ್ದು, ಸೆ.25ರ ತನಕ ನಡೆಯುವ ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
Kshetra Samachara
20/09/2022 01:25 pm