ಮಳೆಗಾಲದಲ್ಲಿ ಕಡಲು ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಉಡುಪಿಯ ಮಲ್ಪೆ ಬೀಚ್‌ನಲ್ಲಿ ಸ್ಥಗಿತಗೊಂಡಿದ್ದ ವಾಟರ್ ಸ್ಪೋರ್ಟ್ಸ್ ಸಹಿತ ಕಡಲ ಕಿನಾರೆಗಿಳಿಯುವುದಕ್ಕೆ ಇನ್ನೂ ಒಂದು ವಾರ ಕಾಯಬೇಕಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳ ಮೊದಲ ವಾರದಿಂದ ಜಲಕ್ರೀಡೆ ಸಹಿತ ಮಲ್ಪೆ ಬಂದರಿನಲ್ಲಿ ಪ್ರವಾಸಿಗರಿಗೆ ಅವಕಾಶ ನೀಡುವ ಬಗ್ಗೆ ತೀರ್ಮಾನ ಆಗಿದೆ. ಆದರೂ ಪದೇಪದೇ ಮಳೆಯಾಗುತ್ತಿದ್ದ ಪರಿಣಾಮ ಸೆ.15ರವರೆಗೆ ನಿರ್ಬಂಧ ಹಾಕಲಾಗಿತ್ತು. ಇದೀಗ ಮತ್ತೊಮ್ಮೆ ಈ ಅವಧಿ ವಿಸ್ತರಣೆಯಾಗಿದೆ. ಸೆ. 25ರ ವರೆಗೂ ಯಾವುದೇ ರೀತಿಯ ಕ್ರೀಡೆ ಮೋಜು, ಸಮುದ್ರಕ್ಕೆ ಇಳಿಯುವುದಕ್ಕೆ ಅವಕಾಶವಿಲ್ಲ.
ಇನ್ನು ಮಲ್ಪೆ ಕಡಲ ಕಿನಾರೆಯಲ್ಲಿ ವಿಧಿಸಿದ್ದ ನಿರ್ಬಂಧ ತೆರವುಗೊಂಡರೆ ಸೈಂಟ್ ಮೇರಿಸ್ ದ್ವೀಪಕ್ಕೂ ಪ್ರವಾ ಗರು ತೆರಳುವುದಕ್ಕೆ ಅವಕಾಶ ಸಿಗಲಿದೆ. ಇದಕ್ಕಾಗಿ ಬೋಟ್‌ಗಳು ಕೂಡ ಸಜ್ಜಾಗಿವೆ. ಈ ಭಾನುವಾರವೂ ಕೂಡ ಮಲ್ಪೆ ಕಡಲ ಕಿನಾರೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಪ್ರವಾಸಿಗರು ಸಮುದ್ರದ ದಡದಲ್ಲಿ ನಿಂತು ಕಡಲ ಅಲೆಗಳನ್ನು ವೀಕ್ಷಿಸಿ ಹಿಂದೆ ತೆರಳಬೇಕಾಯಿತು.ಹೀಗಾಗಿ ಮಲ್ಪೆಗೆ ಬರುವ ಪ್ರವಾಸಿಗರು ಪ್ರಸಿದ್ಧ ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳಲು ಇನ್ನಷ್ಟು ದಿನ ಕಾಯಬೇಕಾಗಿದೆ.
PublicNext
19/09/2022 04:32 pm