ಮುಲ್ಕಿ: ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಗ್ರಾಮದ ಬೀಟ್ ಸಭೆ ಹಾಗೂ ಮುಂಬರುವ ನವರಾತ್ರಿ ಹಬ್ಬದ ಆಚರಣೆ ಬಗ್ಗೆ ಶಾಂತಿ ಹಾಗೂ ಬೀಟ್ ಸಭೆ ಮೆನ್ನಬೆಟ್ಟು ನೇಕಾರ ಕಾಲೋನಿ, ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ನಡೆಯಿತು.
ಸಭೆ ಅಧ್ಯಕ್ಷತೆಯನ್ನು ಭಜನಾ ಮಂದಿರದ ಅಧ್ಯಕ್ಷ ಶಿವರಾಮ ವಹಿಸಿದ್ದರು. ಸಭೆಯಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಎಎಸ್ಐ ಕೃಷ್ಣಪ್ಪ ಮಾತನಾಡಿ ಮುಂಬರುವ ನವರಾತ್ರಿ ಸಹಿತ ಹಬ್ಬ ಹರಿದಿನಗಳಲ್ಲಿ ನಾಗರಿಕರು ಶಾಂತಿ ಸಾಮರಸ್ಯ ಕಾಪಾಡುವುದರ ಜೊತೆಗೆ ಮಾದರಿ ಗ್ರಾಮಕ್ಕೆ ಶ್ರಮಿಸಬೇಕು ಎಂದರು.
ಅವರು ಮಾತನಾಡಿ ಗ್ರಾಮದಲ್ಲಿ ಸಂಶಯಾಸ್ಪದ ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಕಂಡುಬಂದಲ್ಲಿ ಠಾಣೆಗೆ ಮಾಹಿತಿ ನೀಡಿ. ಮಕ್ಕಳು ಸಾಮಾಜಿಕ ಜಾಲತಾಣದ ಬಗ್ಗೆ ಜಾಗೃತರಾಗಿರಿ,ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಯುವ ಜನಾಂಗಕ್ಕೆಅರಿವು ಮೂಡಿಸಿ ಎಂದರು. ಗ್ರಾಮಸ್ಥ ಹಾಗೂ ಸಾಮಾಜಿಕ ಕಾರ್ಯಕರ್ತೆ ಅನಿತಾ ಮತ್ತಿತರರು ಮಾತನಾಡಿದರು.
Kshetra Samachara
16/09/2022 10:26 am