ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಶಿಕ್ಷಣ ಕ್ಷೇತ್ರದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಸಾಧನೆ ಅವಿಸ್ಮರಣೀಯ

ಮುಲ್ಕಿ:ಕಿನ್ನಿಗೋಳಿ ಜೆ. ಬಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಇಂಜಿನಿಯರ್ಸ್ ದಿವಸವನ್ನು ಕಿನ್ನಿಗೋಳಿ ಯುಗಪುರುಷ ದಲ್ಲಿ ಆಯೋಜಿಸಲಾಯಿತು.

ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ತಿನ ಸದಸ್ಯ ಭುವನಾಭಿರಾಮ ಉಡುಪ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಸಾಧನೆ ಅವಿ ಸ್ಮರಣೀಯವಾಗಿದ್ದು ಯುವ ಜನಾಂಗ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ರೋಟರಿ ಸಂಸ್ಥೆಯ ಸದಸ್ಯ ಇಂಜಿನಿಯರ್ ತ್ಯಾಗರಾಜ್ ಆಚಾರ್ಯ   ರವರನ್ನು ಸನ್ಮಾನಿಸಲಾಯಿತು, ಸನ್ಮಾನ ಸ್ವೀಕರಿಸಿದ   ತ್ಯಾಗರಾಜ್ ಆಚಾರ್ಯ ಮಾತನಾಡಿದರು.

ಕ್ಲಬ್ಬಿನ ಅಧ್ಯಕ್ಷ ಸಂತೋಷ್ ಶೆಟ್ಟಿ ಪುನರೂರು, ಗೌರವಾಧ್ಯಕ್ಷ  ವಿನ್ಸೆಂಟ್ ಡಿಕೋಸ್ತ ಉಪಾಧ್ಯಕ್ಷ ಮೈಕಲ್ ಪಿಂಟೊ, ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ .ಪ್ರಥ್ವಿರಾಜ್ ಆಚಾರ್ಯ, ಗಣೇಶ್ ಶೆಟ್ಟಿಗಾರ್, ಅರವಿಂದ್ ಆಚಾರ್ಯ ಉಪಸ್ಥಿತರಿದ್ದರು .

Edited By : PublicNext Desk
Kshetra Samachara

Kshetra Samachara

16/09/2022 06:57 am

Cinque Terre

3.35 K

Cinque Terre

1

ಸಂಬಂಧಿತ ಸುದ್ದಿ