ಬೈಂದೂರು :ಕಲ್ಕತ್ತಾ ಹಲ್ಡಿಯ ಹುಡುಗ ಲಡಾಕ್ ವರೆಗೆ ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಸೈಕಲ್ ನಲ್ಲಿ ಜನಜಾಗೃತಿ ಅಭಿಯಾನ.
ಬೈಂದೂರು : ಕಲ್ಕತ್ತಾ ರಾಜ್ಯ ಹಾಲ್ದಿಯ ಊರಿನ ಓರ್ವ ಮುಸ್ಲಿಂ ಯುವಕ ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಸೈಕಲ್ ನಲ್ಲಿ ಅಭಿಯಾನ ಹೊರಟು ದೇಶ ದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಲಡಾಕ್ ಸೇರಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ ,ಕರ್ನಾಟಕ ರಾಜ್ಯ ಸೇರಿ ಇಡೀ ದೇಶ ಸೈಕಲ್ ನಲ್ಲಿ ಸುತ್ತಾ ಡಿ ನಿನ್ನೆ ಕುಂದಾಪುರ ಬಳಿಯ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ 66ರ ಹತ್ತಿರ ಬೈಂದೂರಿನ ಓರ್ವರು ಆತನನ್ನು ನಿಲ್ಲಿಸಿ ಮಾತನಾಡಿಸಿ ವಿಚಾರಿಸಿದಾಗ
.
ಆತ ತಾನು ವೃತಿಯಲ್ಲಿ ಬಟ್ಟೆ ಡಿಸೈನರ್ ಆಗಿ ದ್ದು ನಮ್ಮ ಊರಿನಲ್ಲಿ ಒಬ್ಬ ವ್ಯಕ್ತಿ ಇದೆ ರೀತಿಯಲ್ಲಿ ಸ್ಯಕಲಿ ನಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ ಅದೇ ನನಗೆ ಪೇರಣೆ ಎಂದು ಹೇಳಿದರು. ಈ ಹುಡುಗನನ್ನು ಮಾತನಾಡಿಸಿದ ನಂತರ ಅವರ ಕೈಯಲ್ಲಿದ್ದ.
ಗಣೇಶ್ ಉತ್ಸವದ ಪ್ರಸಾದ ಯವಕನಿಗೆ ನೀಡಿ ಉಪಚರಿಸಿದ್ದರು. ಹುಡುಗ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಸ್ಯಕಲ್ ಸುತ್ತಲೂ ಪೇಪರ್ ಬೋರ್ಡ್ ಹಾಕಿದ್ದಾರೆ.
ರಾಷ್ಟ್ರದ ಧ್ವಜ ಇದೆ.ದಿನಕ್ಕೆ 30 ಕಿಲೋ ಮೀಟರ್ ಹೋಗುತ್ತಾರೆ. ಜನರು ಏನಾದ್ರೂ ಕೊಟ್ಟರೆ ಸ್ವೀಕರಿಸುತ್ತಾರೆ.ಒಟ್ಟಾರೆಯಲ್ಲಿ ದೇಹ ದಂಡಿಸಿ ಕಠಿಣ ಪರಿಶ್ರಮ ಪಟ್ಟು ಈ ರೀತಿಯ ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯ.
Kshetra Samachara
05/09/2022 05:55 pm