ಮಂಗಳೂರು; ಇಡೀ ದೇಶವನ್ನೇ ತಲ್ಲಣ ಗೊಳಿಸಿದ್ದ ಗುಜರಾತ್ ಗಲಭೆಯ ಸಂಧರ್ಭದಲ್ಲಿ ನಡೆದ ಬಿಲ್ಕೀಸ್ ಬಾನು ಮೇಲಿನ ಅತ್ಯಾಚಾರ ಪ್ರಕರಣದ ಕುಖ್ಯಾತ ಅಪರಾಧಿಗಳನ್ನು ಬಿಡುಗಡೆ ಗೊಳಿಸಿದ ಗುಜರಾತ್ ರಾಜ್ಯದ ಕ್ರಮ ಮತ್ತು ಅವರಿಗೆ ಧರ್ಮ ರಕ್ಷಣೆಯ ಸಂಘಟನೆಯೊಂದು ಹೂಹಾರ ಹಾಕಿ ಸ್ವಾಗತಿಸಿದ್ದು ದೇಶ ಯಾವ ಕಡೆ ಸಾಗುತ್ತಿದರೆ ಎಂಬದಕ್ಕೆ ದುರಂತ ಸಾಕ್ಷಿಯಾಗಿದ್ದು ಈ ಬೆಳವಣಿಗೆ ದೇಶವನ್ನು ನೈತಿಕ ಅ್ದಪತನದತ್ತ ಕೊಂಡೋಯ್ಯಲು ಮಾತ್ರ ಸಹಕಾರಿಯಾಗುತ್ತದೆ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಟಿದೆ.
ಈ ದುರ್ಘಟನೆಯನ್ನು ಕಟುವಾಗಿ ವಿಮರ್ಶಿಸುವುದರೊಂದಿಗೆ ಸರಕಾರವು ಸಂತ್ರಸ್ತೆ ಬಿಲ್ಖೀಸ್ ರ ನಿಯಮಾನುಸಾರ ಇರುವ ಹಕ್ಕನ್ನು ಕಸಿದುಕೊಂಡು ಅನ್ಯಾಯ ವೆಸಗಿದೆ ಎಂದು ಸಮಿತಿ ಆರೋಪಿಸಿದೆ.
ಸಂಸದೀಯ ಮಂಡಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಅಪರಾಧಿಗಳನ್ನು ಕೂಡಲೇ ಜೈಲಿಗೆ ಕಳುಹಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿದೆ.
ಕೊಡಗಿನ ಧರ್ಮಗುರುಗಳಾದ ಹಾರಿಸ್ ಮುಸ್ಲಿಮಾರ್ ಎಂಬವರು ತಮ್ಮ ಪತ್ನಿ,ಮಕ್ಕಳ ಜೊತೆ ವಿರಾಜಪೇಟೆಯಿಂದ ಕಬಡಕ್ಕೇರಿ ಮಸೀದಿಗೆ ತೆರಳುವಾಗ ಕಾಕೋಟುಪರಂಬು ಮೈತಾಡಿ ಜಂಕ್ಷನ್ ನಲ್ಲಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿ, ಪತ್ನಿ, ಮಕ್ಕಳ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ.ಇದು ಅತ್ಯಂತ ಖಂಡನೀಯ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟವು ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
22/08/2022 11:22 am