ಮುಲ್ಕಿ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಮ್ ವತಿಯಿಂದ ಭಾರತದ ಸ್ವಾತಂತ್ರೋತ್ಸವದ ಅಮೃತಮಹೋತ್ಸವದ ಅಂಗವಾಗಿ ಕಾರ್ನಾಡು ಮದ್ರಸತನ್ನೂರಿಯ ವಠಾರದಲ್ಲಿ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ರಕ್ತ ದಾನ ಶಿಬಿರ ನಡೆಯಿತು ಜನಾಬ್ ಮುಬೀನ್ ಕೊಲ್ನಾಡ್ ರವರು ದುವಾ ನೆರವೇರಿಸಿದರು.
ಮುಲ್ಕಿ ಶಾಫಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಬಿ.ಮ್. ಲಿಯಾಖತ್ ಆಲಿ ರವರು ಸ್ವಾಗತಿಸಿದರು. ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರಕ್ತದಾನದ ಮೂಲಕ ಮನುಷ್ಯನ ಜೀವಉಳಿಸುವ ಕಾರ್ಯ ಶ್ಲಾಘನೀಯ ಎಂದರು.
ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣ ಮಾತನಾಡಿ ರಕ್ತದಾನ ಮಾಡುವ ಮಹತ್ವದ ಬಗ್ಗೆ ಮತ್ತು ಪಾಲಿಸಬೇಕಾದ ನಿಯಮಗಳ ಬಗ್ಗೆ ಜನರಿಗೆ ತಿಳಿಹೇಳಿದರು. ಬಳಿಕ ರಕ್ತದಾನ ಶಿಬಿರ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಮುಲ್ಕಿ ಬ್ಲಡ್ ಡೋನರ್ಸ್ ಫೋರಮ್ ಅಧ್ಯಕ್ಷರಾದ ಬಿ.ಮ್. ಲಿಯಾಖತ್ ಆಲಿ,ಪಾಪ್ಯುಲರ್ ಫ್ರೆಂಟ್ ಬ್ಲಡ್ ಡೋನರ್ಸ್ ಫೋರಂನ ಪ್ರಧಾನ ಕಾರ್ಯದರ್ಶಿ ಕೆ.ಎ ಇಬ್ರಾಹಿಂ ಮುಖ್ಯ ಅತಿಥಿಗಳಾಗಿ ಪೊಲೀಸ್ ಇನ್ಸೆಕ್ಟರ್ ಕೆ. ಕುಸುಮಾಧರ ಹಾಗು ಕ್ಯಾಥೊಲಿಕ್ ಚರ್ಚ್ ಧರ್ಮಗುರುಗಳಾದ ರೆ ಫಾ ಸಿಲ್ವೆಸ್ಟರ್ ಡಿಕೋಸ್ತ ಭಾಗವಹಿಸಿದ್ದರು.
ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಖಜಾಂಚಿ ಇಕ್ಬಾಲ್ ಅಹ್ಮದ್ ಮುಲ್ಕಿ ಧನ್ಯವಾದ ಅರ್ಪಿಸಿದರು,ಮುಬೀನ್ ಕೊಲ್ನಾಡ್ ನಿರೂಪಿಸಿದರು.
Kshetra Samachara
15/08/2022 04:01 pm