ಮುಲ್ಕಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸಾರ್ವಜನಿಕವಾಗಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಮುಲ್ಕಿಯ ಹೃದಯ ಭಾಗದ ಕಾರ್ನಾಡು ಗಾಂಧಿ ಮೈದಾನವು ತ್ರಿವರ್ಣ ಬೆಳಕಿನೊಂದಿಗೆ ಕಣ್ಮನ ಸೆಳೆಯುತ್ತಿದೆ.
ಸ್ವಾತಂತ್ರ್ಯ ಸಂಗ್ರಾಮದ 75 ಸಂವತ್ಸರದ ಸವಿನೆನಪಿನಲ್ಲಿ ಅಮೃತ ಮಹೋತ್ಸವದ ಕೊಡುಗೆಯಾಗಿ ಮುಲ್ಕಿ ನಗರ ಪಂಚಾಯತಿನ ನೇತೃತ್ವದಲ್ಲಿ ನಗರ ಪಂಚಾಯತ್ ಕಟ್ಟಡ ಹಾಗೂ ಗಾಂಧಿ ಮೈದಾನವನ್ನು ವಿಶೇಷ ಬೆಳಕಿನೊಂದಿಗೆ ಸಿಂಗರಿಸಲಾಗಿದೆ.
ದೇಶಭಕ್ತ ಕಾರ್ನಾಡು ಸದಾಶಿವ ರಾವ್ ಹಾಗೂ ದಿ.ರಾಮಕೃಷ್ಣ ಪೂಂಜ ರವರ ಮನೆಯಲ್ಲಿ 75 ಸ್ವಾತಂತ್ರ್ಯೋತ್ಸವದ ಸಂಭ್ರಮದ ವಾತಾವರಣ ನೆಲೆಸಿದ್ದು ಕಾರ್ನಾಡ್ ನಲ್ಲಿರುವ ಸದಾಶಿವ ರಾವ್ ವೃತ್ತವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.
Kshetra Samachara
14/08/2022 08:16 pm