ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಕೊಲೆಯ ಮರು ದಿನದಿಂದ ಪರಿಸರದಲ್ಲಿ ಹರಡಿದ್ದ ವದಂತಿಗಳು ನಿಜವಾಗಿದೆ. ಬಿಜೆಪಿ ಪರಿವಾರದಲ್ಲಿ ಗುರುತಿಸಿಕೊಂಡಿದ್ದ 6 ಕ್ರಿಮಿನಲ್ ಗಳ ಬಂಧನವಾಗಿದೆ. ಫಾಝಿಲ್ ಕೊಲೆಯನ್ನು ಬಂಧಿತರೆ ನಡೆಸಿರುವುದರ ಕುರಿತು ಯಾರಿಗೂ ಅನುಮಾನಗಳಿಲ್ಲ. ಪೊಲೀಸರು ಇಲ್ಲಿಯವರಗೆ ಸರಿಯಾದ ಕಡೆಗೇ ತಲುಪಿದ್ದಾರೆ ಎಂದು ಡಿ ವೈ ಎಫ್ ಐ ನಾಯಕ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಅವರು ಜಿಲ್ಲಾಡಳಿತದ ಮೂಲಕ ಸ್ಪಷ್ಟನೆ ಕೇಳ ಬಯಸಿ ತನ್ನ ಪ್ರಶ್ನೆಗಳಿಗೆ ಉತ್ತರಿಸಲು ಒತ್ತಾಯಿಸಿದ್ದಾರೆ ಕೊಲೆಗಡುಕರು ಫಾಝಿಲ್ ನನ್ನೇ ಹುಡುಕಿಕೊಂಡು ಬಂದರೆ ? ಹೌದು ಅಂತಾದರೆ ಯಾವ ಕಾರಣಕ್ಕೂ "ಟಾರ್ಗೆಟ್" ಮಾಡಲು ಸಾಧ್ಯವಿಲ್ಲದ ಒಳ್ಳೆಯ ಗುಣ ನಡತೆಯ ಸಾಮಾನ್ಯ ಹುಡುಗನನ್ನು ಜನಜಂಗುಳಿಯ ಮಧ್ಯೆ ಹುಡುಕಿ ಹೊಡೆದದ್ದು ಯಾಕೆ ?
ಬಂಧಿತರು ಜಾಗರಣ ವೇದಿಕೆ, ಬಜರಂಗ ದಳದಲ್ಲಿ ಗುರುತಿಸಿಕೊಂಡಿದ್ದು, ಈ ಹಿಂದೆಯೂ ರಾಜಕೀಯ ಪ್ರೇರಿತ ಮತೀಯ ದ್ವೇಷದ ಕೊಲೆ, ಹಲ್ಲೆಗಳಲ್ಲಿ ಭಾಗಿಯಾಗಿರುವುದು, ತಮ್ಮ ಕಮ್ಯುನಲ್, ಕ್ರಿಮಿನಲ್ ಚಟುವಟಿಕೆಗಳಿಗೆ ಬಿಜೆಪಿಯ ರಾಜಕೀಯ ಆಶ್ರಯ ಹೊಂದಿರುವುದು ಸುರತ್ಕಲ್ ಪರಿಸರದ ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ. ಹಾಗಿರುತ್ತಾ ಪೊಲೀಸರು ಇವರ ರಾಜಕೀಯ ಹಿನ್ನಲೆಯ ಕುರಿತಾದ ಮಾಹಿತಿ ಬಹಿರಂಗ ಪಡಿಸದಿರುವುದು ಯಾಕೆ ?
ಫಾಝಿಲ್ ಕೊಲೆಗೆ ಎರಡು ದಿನಗಳ ಮೊದಲೇ ಆಜಿತ್ ಕ್ರಾಸ್ತಾ ನಿಂದ ಬಂಧಿತರು ಕಾರು ಬಾಡಿಗೆ ಪಡೆದಿರುವುದಾಗಿ ಸುದ್ದಿ ಇದೆ. ಈ ಕೊಲೆಗೆ ಪೂರ್ವತಯಾರಿ ನಡೆದಿರುವುದಕ್ಕೆ ಇದು ಸಾಕ್ಷಿ. ರಾಜಕೀಯ ಬೆಂಬಲ ಇಲ್ಲದೆ ರಾಜಕೀಯ ಮಹತ್ವವುಳ್ಳ ಈ ಕೊಲೆ ನಡೆದಿರಲಾರದು. ಪಿತೂರಿಗಾರರು, ರಾಜಕೀಯ ಆಶ್ರಯದಾತರು, ಕೊಲೆಗೆ ಛೂ ಬಿಟ್ಟವರನ್ನು ಬಂಧಿಸಬೇಡವೆ ? ತನಿಖಾಧಿಕಾರಿಗಳ ಕೈ ಅಲ್ಲಿಯವರಗೆ ತಲುಪುವುದು ಯಾವಾಗ ?
ಫಾಝಿಲ್ ಕೊಲೆಯಾಗಿ ಎರಡು ಗಂಟೆಯ ನಂತರ (ರಾತ್ರಿ ಹತ್ತು ಗಂಟೆಗೆ) ಏಕಕಾಲದಲ್ಲಿ ವಿಎಚ್ ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಭಜರಂಗ ದಳ ಸಂಚಾಲಕ ಪ್ರದೀಪ್ ಸರಿಪಳ್ಳ ಪ್ರವೀಣ್ ನೆಟ್ಯಾರು ಅವರಿಗೆ ಶ್ರದ್ದಾಂಜಲಿ ಅರ್ಪಿಸುವ (ನಿನಗಿದೊ ಶ್ರದ್ದಾಂಜಲಿ) ಪೋಸ್ಟ್ ಅನ್ನು ಫೇಸ್ ಬುಕ್ ನಲ್ಲಿ ಹಾಕುತ್ತಾರೆ. ಪ್ರವೀಣ್ ನೆಟ್ಯಾರು ಹತ್ಯೆಗೀಡಾಗಿ ನಾಲ್ಕು ದಿನದ ನಂತರ, ಫಾಝಿಲ್ ಕೊಲೆಯ ಸುದ್ದಿ ದೃಢ ಪಟ್ಟ ಗಳಿಗೆಯಲ್ಲೇ ಪ್ರವೀಣ್ ಅವರಿಗೆ ಶ್ರದ್ದಾಂಜಲಿ ಪೋಸ್ಟ್ ಅನ್ನು "ಫಯರ್ ಬ್ರಾಂಡ್" ನಾಯಕರು ಹಾಕಿರುವುದರ ಸಂದೇಶ ಏನು ? ಪೊಲೀಸ್ ಹಿರಿಯ ಅಧಿಕಾರಿಗಳು ಈ ಕುರಿತು ಕಣ್ಣು ಮುಚ್ಚಿರುವುದು ಯಾಕೆ ? ಫಾಝಿಲ್ ಕೊಲೆಗೈದ ಬಜರಂಗ ದಳ, ಬಿಜೆಪಿ ನಂಟಿನ ಕ್ರಿಮಿನಲ್ ಗಳಿಗೂ ಈ "ನಾಯಕ" ರಿಗೂ, ಅವರು ಹಾಕಿದ ಪೋಸ್ಟ್ ಗೂ ಇರುವ ಸಂಬಂಧ ಏನು ?
ಕೋಮು ಸಂಘರ್ಷದಿಂದ ಬಸವಳಿದಿರುವ ಮಂಗಳೂರು ನಾಗರಿಕರ ಮುಂದಿರುವ ಫಾಝಿಲ್ ಕೊಲೆಗೆ ಸಂಬಂಧಿಸಿದ ಅನುಮಾನಗಳಾಗಿದ್ದು ಸಂಬಂಧ ಪಟ್ಟವರು ಪರಿಶೀಲಿಸಬೇಕು ಹಾಗೂ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಡಿ ವೈ ನಾಯಕ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಸಂಬಂಧಪಟ್ಟ ಆಡಳಿತವನ್ನು ಒತ್ತಾಯಿಸಿದ್ದಾರೆ
Kshetra Samachara
02/08/2022 08:25 pm