ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ಗುಡುಗು ಸಹಿತ ಬಾರಿ ಗಾಳಿ ಮಳೆಯಾಗಿದ್ದು ಹಾನಿ ಸಂಭವಿಸಿದೆ ಗಾಳಿ ಮಳೆಗೆ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೆಎಸ್ ರಾವ್ ನಗರ ಅಂಚೆ ಕಚೇರಿ ಬಳಿ ಆನಂದ ಎಂಬವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ.
ಬೆಳಗಿನ ಜಾವ ಮನೆಗೆ ಮರ ಬಿದ್ದಿದ್ದು ಬಾರಿ ಶಬ್ದ ಉಂಟಾಗಿದೆ. ಮರ ಬಿದ್ದ ಸಂದರ್ಭಮನೆಯ ಹಂಚು ಕೆಳಗೆ ಬಿದ್ದಿದ್ದು ಈ ಸಂದರ್ಭ ಆನಂದ ರವರು ಮನೆಯಿಂದ ಹೊರಗೆ ಓಡಿ ಪವಾಡ ಸದೃಶ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದೆ.
ಸ್ಥಳಕ್ಕೆ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ,ಮಾಜೀ ಸದಸ್ಯ ಕುಳಾಯಿ ಬಷೀರ್ ಭೇಟಿ ನೀಡಿ ಪರಿಶೀಲಿಸಿದ್ದು ಮರ ತೆರವುಗೊಳಿಸುವ ಕಾರ್ಯ ನಡೆದಿದೆ.
ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ ,ಹಳೆಯಂಗಡಿ, ಪಡುಪಣಂಬೂರು, ಅತಿಕಾರಿ ಬೆಟ್ಟು ಪಕ್ಷಿಕೆರೆ ಪ್ರದೇಶಗಳಲ್ಲಿ ಶನಿವಾರ ಬೆಳಗಿನ ಜಾವ ಗುಡುಗು ಸಹಿತ ಮಳೆ ಸುರಿದಿದ್ದು ಅಲ್ಪ ಸ್ವಲ್ಪ ಹಾನಿ ಸಂಭವಿಸಿದೆ.
Kshetra Samachara
30/07/2022 10:32 am