ಕಟೀಲು: ಮೂಡುಬಿದಿರೆಯ ತಿಲಕ್ ರವರು ಧಾನ್ಯಗಳನ್ನು ಅಂಟಿಸಿ ಕಟೀಲಿನ ದುರ್ಗೆಯ ಭಾವಚಿತ್ರ ರಚಿಸಿದ್ದು ಅದನ್ನು ಕಟೀಲು ದೇವಳಕ್ಕೆ ಸೇವಾರೂಪವಾಗಿ ನೀಡಿದರು.
ತಿಲಕ್ ಈ ಹಿಂದೆ ಅಶ್ವತ್ಥದ ಎಲೆಯಲ್ಲಿ ಕಟೀಲುದೇವಿಯ ಭಾವಚಿತ್ರವನ್ನೂ ಬಿಡಿಸಿ ದೇವಳಕ್ಕೆ ನೀಡಿದ್ದರು. ದುರ್ಗೆಯ ಈ ಭಾವಚಿತ್ರವನ್ನೂ ದೇವಳದ ಪದವಿಪೂರ್ವಕಾಲೇಜಿನ ಮ್ಯೂಸಿಯಂ ಗೆ ಹಸ್ತಾಂತರಿಸಿ ಸಂರಕ್ಷಿಸಿ ಇಡಲಾಗುವುದೆಂದು ದೇವಳದ ಅರ್ಚಕ ಶ್ರೀ ಹರಿ ನಾರಾಯಣ ದಾಸ ತಿಳಿಸಿದ್ದಾರೆ.ಈ ಸಂದರ್ಭ ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಉಪಸ್ತಿತರಿದ್ದರು.
Kshetra Samachara
26/07/2022 08:04 pm