ಕಟೀಲು:ಸಮೀಪದ ಜಲಕದ ಕಟ್ಟೆ ಕಿರು ಸೇತುವೆಯಲ್ಲಿ ಕಸಕಡ್ಡಿ ಮರ ಮುಟ್ಟುಗಳ ರಾಶಿ ಸಂಗ್ರಹವಾಗಿದ್ದು ನಂದಿನಿ ನದಿಯಲ್ಲಿ ಸರಾಗ ನೀರು ಹರಿಯಲು ತೊಂದರೆಯಾಗುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಕಟೀಲು ಜಲಕದ ಕಟ್ಟೆ ಮೂಲಕ ಬಡಗ ಎಕ್ಕಾರು ಗ್ರಾಮದ ಕುಕ್ಕುಂಡೇಲು ಸಂಪರ್ಕ ಕಲ್ಪಿಸುವ ಕಿರು ಸೇತುವೆಯಲ್ಲಿ ಕಸ ಕಡ್ಡಿ ಮರಮುಟ್ಟುಗಳು ಸಿಲುಕಿಕೊಂಡು ಕೃತಕ ನೆರೆ ಉಂಟಾಗಿತ್ತು.
ಭಾರಿ ಮಳೆಗೆ ಕಿರು ಸೇತುವೆ ಕೂಡ ಜಲಾವೃತವಾಗಿತ್ತು. ಈ ಸಂದರ್ಭ ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ತಾತ್ಕಾಲಿಕ ನೆಲೆಯಲ್ಲಿ ಸೇತುವೆ ಕೆಳಬದಿಯಲ್ಲಿ ಸಿಲುಕಿಕೊಂಡ ಮರ ಮುಟ್ಟು ಹಾಗೂ ಕಸ ಕಡ್ಡಿಗಳನ್ನು ತೆರವುಗೊಳಿಸಿದ್ದರು.
ಆದರೆ ಕಸಗಡ್ಡಿ ಹಾಗೂ ಮರ ಮುಟ್ಟುಗಳು ಮತ್ತೆ ಸೇತುವೆ ಕೆಳಭಾಗದಲ್ಲಿ ಸೇರಿದ್ದು ನೀರು ಸರಾಗವಾಗಿ ಹರಿಯಲು ತೊಂದ್ರೆಯಾಗುತ್ತಿದೆ. ಮತ್ತೆ ಮಳೆ ಬಂದರೆ ಕೃತಕ ನೆರೆ ಭೀತಿ ಎದುರಾಗಿದೆ. ಕೂಡಲೇ ಸಂಬಂಧ ಪಟ್ಟ ಇಲಾಖೆ ಸೇತುವೆ ಆಡಿ ಭಾಗದಲ್ಲಿ ಸಿಲುಕುಕೊಂಡಿರುವ ಮರ ಮುಟ್ಟು ಹಾಗೂ ಕಸ ಕಡ್ಡಿಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
21/07/2022 05:14 pm