ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ವಿಜಯ ಸನ್ನಿಧಿ ಬಳಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆಗೆ ಪ್ರಯತ್ನ: ಸುಭಾಷ್ ಶೆಟ್ಟಿ

ಮುಲ್ಕಿ: ನಗರ ಪಂಚಾಯತಿ ವ್ಯಾಪ್ತಿಯ ವಿಜಯ ಸನ್ನಿಧಿ ಬಳಿ ದ ಹಲವಾರು ವರ್ಷಗಳಿಂದ ವಾಹನ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದ್ದು ಈ ಬಗ್ಗೆ ಮುಲ್ಕಿ ನಗರ ಪಂಚಾಯತ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತಿದೆ.

ವಿಜಯ ಸನ್ನಿಧಿ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಬಳಿಯಲ್ಲಿ ಜೆಸಿಬಿ ಮೂಲಕ ಕೆಲ ಗೂಡಂಗಡಿಗಳನ್ನು ನೆಲಸಮ ಮಾಡಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಶ್ ಶೆಟ್ಟಿ ಹೇಳಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸದಾ ಜನನಿ ಬಿಡ ಪ್ರದೇಶವಾಗಿರುವ ವಿಜಯ ಸನ್ನಿಧಿ ಬಳಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ದ್ವಿಚಕ್ರ ವಾಹನ ಸವಾರರು ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಬದಿಯಲ್ಲಿ ನಿಲುಗಡೆ ಮಾಡಿ ಮಂಗಳೂರು ಉಡುಪಿ ಕಡೆಗೆ ಉದ್ಯೋಗಕ್ಕಾಗಿ ತೆರಳುವುದರಿಂದ ಬ್ಯಾಂಕ್ ಸೊಸೈಟಿ ಗೆ ಬರುವ ಗ್ರಾಹಕರಿಗೆ ತೀವ್ರ ತೊಂದರೆಯಾಗಿತ್ತು. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದಲ್ಲಿ ಪ್ರಕಟವಾಗಿತ್ತು ಹಾಗೂ ಸೊಸೈಟಿ ಸಾಮಾನ್ಯ ಸಭೆ ತೀವ್ರ ಚರ್ಚೆಗೆ ಗುರಿಯಾಗಿತ್ತು.

Edited By : PublicNext Desk
Kshetra Samachara

Kshetra Samachara

20/07/2022 10:43 am

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ