ಮುಲ್ಕಿ:ಹೆಚ್ಚಾಗಿ ಗ್ರಾಮೀಣ ಪ್ರದೇಶದ ಗುಡ್ಡೆ ಕಾಡಿನಲ್ಲಿ ಕಾಣಸಿಗುತ್ತಿದ್ದ ತುಳುವಿನಲ್ಲಿ ಕುಂಟಾಲ ಹಣ್ಣು ಎಂದು ಕರೆಯಲ್ಪಡುವ ಹಣ್ಣು ಇದೀಗ ವಿರಳವಾಗಿದೆ.ಪ್ರತಿವರ್ಷ ಮೇ ಮತ್ತು ಜೂನ್ ತಿಂಗಳಲ್ಲಿ ಈ ಮರದಲ್ಲಿ ಕಾಯಿ ಬಿಟ್ಟು ಹಣ್ಣಾಗುತ್ತದೆ, ನೆರಳೆ ಹಣ್ಣನ್ನು ಹೋಲುವ ಈ ಹಣ್ಣು ತಿಂದಾಗ ನಾಲಗೆ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಮಕ್ಕಳಿಗೆ ಈ ಹಣ್ಣು ಬಹಳ ಪ್ರಿಯವಾಗಿದೆ, ಆದರೆ ಕಾಡು ನಾಶವಾಗುತ್ತ ಬಂದಿರುವ ಈ ಆಧುನಿಕ ಯುಗದಲ್ಲಿ ಕಾಣೆಯಾಗುತ್ತಿದ್ದು, ಬಹಳ ವಿರಳವಾಗಿದೆ.
Kshetra Samachara
16/07/2022 06:57 pm