ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡ್:ಪೂಂಜ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ, ವೈದ್ಯಕೀಯ ಚಿಕಿತ್ಸೆಗೆ ಸಹಾಯಹಸ್ತ

ಮುಲ್ಕಿ: ಗ್ರಾಮೀಣ ಪ್ರದೇಶದ ಶಿಕ್ಷಣ ಹರಿಕಾರ ದಿ. ರಾಮಕೃಷ್ಣ ಪೂಂಜ ಟ್ರಸ್ಟ್ ವತಿಯಿಂದ ಶ್ರೀಮತಿ ಸರಸ್ವತಿ ಪೂಂಜ ಸ್ಮರಣಾರ್ಥ ಭಾಸ್ಕರ ಪೂಂಜ ರವರ ಸಹಭಾಗಿತ್ವದಲ್ಲಿ ಸುಮಾರು 2.5ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿ ವೇತನ, ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಕಾರ್ಯಕ್ರಮ ಟ್ರಸ್ಟ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅರವಿಂದ ಪೂಂಜಾ ರವರ ನೇತೃತ್ವದಲ್ಲಿ ಕಾರ್ನಾಡ್ ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ಮಂಗಳೂರಿನ ಸಾಫ್ಟ್ ವೇರ್ ಉದ್ಯಮಿ ಸ್ವರೂಪ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಸವಲತ್ತುಗಳನ್ನು ಉಪಯೋಗಿಸಿಕೊಂಡು ಗುರು ಹಿರಿಯರಿಗೆ ಪೋಷಕರಿಗೆ ವಿಧೇಯರಾಗಿ ಮಾದರಿಯಾಗಬೇಕು ಎಂದರು

ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಮ್ಯಾನೇಜಿಂಗ್ ಡೈರೆಕ್ಟರ್ ಎಂ ಎಚ್ ಅರವಿಂದ ಪೂಂಜ ವಹಿಸಿ ಮಾತನಾಡಿ ಕಳೆದ 45 ವರ್ಷಗಳಿಂದ ನಿರಂತರ ಸಹಾಯ ಹಸ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಟ್ರಸ್ಟ್ ನ ಆದಿತ್ಯ ಪೂಂಜ, ಮುಲ್ಕಿ ನಪಂ ಸದಸ್ಯ ಹರ್ಷರಾಜ ಶೆಟ್ಟಿ,ಮಾಜೀ ಅಧ್ಯಕ್ಷ ಸುನಿಲ್ ಆಳ್ವ, ಶ್ರೀಧರ ಶೆಟ್ಟಿ ಮುಕ್ಕ,ಅಶೋಕ್ ಕುಮಾರ್ ಶೆಟ್ಟಿ, ಉದಯ ಶೆಟ್ಟಿ ಅಧಿಧನ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ನವೀನ್ ಶೆಟ್ಟಿ,ಟ್ರಸ್ಟ್ ಸದಸ್ಯರಾದ ವೈ.ಎನ್.ಸಾಲ್ಯಾನ್, ಸರ್ವೋತ್ತಮ ಅಂಚನ್, ಶರತ್ ಶೆಟ್ಟಿ, ಸಂಕಲ ಕರಿಯ, ಸುಂದರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ವೈ ಎನ್ ಸಾಲ್ಯಾನ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

14/07/2022 07:56 pm

Cinque Terre

1.84 K

Cinque Terre

0

ಸಂಬಂಧಿತ ಸುದ್ದಿ