ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಪ್ರಥಮ ಚಿಕಿತ್ಸಾ ಕೌಶಲ್ಯದಿಂದ ಜೀವ ರಕ್ಷಣೆ: ಡಾ.ಸತೀಶ್‌ಕುಮಾರ್ ಭಂಡಾರಿ

ಮಂಗಳೂರು*: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ನಿಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ, ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದಲ್ಲಿ ಪತ್ರಕರ್ತರಿಗೆ ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ ನಗರದ ಪತ್ರಿಕಾ ಭವನದಲ್ಲಿ ನಡೆಯಿತು.

ನಿಟ್ಟೆ (ಪರಿಗಣಿತ )ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಶಿಬಿರವನ್ನು ಉದ್ಘಾಟಿಸಿದರು. ನಮ್ಮ ಜೀವದ ರಕ್ಷಣೆ,ಇತರರ ಅಮೂಲ್ಯ ಜೀವ ರಕ್ಷಣೆಗೆ ಪ್ರಥಮ ಚಿಕಿತ್ಸಾ ಕೌಶಲ್ಯದ ಅರಿವು ಅಗತ್ಯ ಎಂದರು.

ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ.(ಅರಿವಳಿಕೆ ಶಾಸ್ತ್ರ ಮತ್ತು ತುರ್ತು ನಿಗಾ ವಿಭಾಗ)ದ ಪ್ರೊಫೆಸರ್ ಡಾ.ಗಾಯತ್ರಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನುದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವಹಿಸಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೊಪಿಸಿದರು.

ಉಪಾಧ್ಯಕ್ಷ ಅನ್ಸಾರ್ ಇನೋಳಿ ಕಾರ್ಯಕ್ರಮ ಸಂಯೋಜಿಸಿದ್ದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಹಾಗು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಥಮ ಚಿಕಿತ್ಸಾ ತರಬೇತಿ ಶಿಬಿರದಲ್ಲಿ ತರಬೇತುದಾರಾಗಿ ಡಾ.ಗಾಯತ್ರಿ ಭಟ್ ನೇತೃತ್ವದ ವೈದ್ಯರ ತಂಡ ದ ಸದಸ್ಯ ಡಾ.ವೈದೇಹಿ ಭೃಗು,ಡಾ.ವರದಾ ಕಂಜಲ್ಕರ್, ಡಾ.ವೈಭವ್ ಯಾದವ್,ಡಾ.ವೀಣಾ ಮಾಧವನ್ ಭಾಗವಹಿಸಿ ಪ್ರಾತ್ಯಕ್ಷಿಕೆ ಯೊಂದಿಗೆ ತರಬೇತಿ ನೀಡಿದರು.

Edited By : PublicNext Desk
Kshetra Samachara

Kshetra Samachara

07/07/2022 09:09 am

Cinque Terre

1.73 K

Cinque Terre

0

ಸಂಬಂಧಿತ ಸುದ್ದಿ