ಮುಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಗೆ ಅಲ್ಪಸ್ವಲ್ಪ ಹಾನಿ ಸಂಭವಿಸಿದೆ. ಮುಲ್ಕಿ ನ. ಪಂ. ವ್ಯಾಪ್ತಿಯ ಬಪ್ಪನಾಡು ಗ್ರಾಮದ ಕೊಳಚಿಕಂಬಳದ ಶ್ರೀ ಜಾರಂದಾಯ ದೈವಸ್ತಾನದ ದ್ವಾರದ ಬಳಿ ಮುಖ್ಯ ರಸ್ತೆಯಲ್ಲಿ ದೊಡ್ಡ ಆಲದ ಮರದ ದೊಡ್ಡ ಗೆಲ್ಲು ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಮರದ ಗೆಲ್ಲುಗಳು ವಿದ್ಯುತ್ ಕಂಬದ ಮೇಲೆ ಬಿದ್ದಿರುವುದರಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಸ್ತಳೀಯರು ಮರದ ಗೆಲ್ಲನ್ನು ಕಡಿದು ಸಂಚಾರ ಸುಗಮಗೊಳಿಸಿದ್ದಾರೆ.
ಕೆಮ್ರಾಲ್ ಗ್ರಾಮದ ಕೊಯಿಕುಡೆಯ ಶೋಭಾ ಎಂಬವರ ಮನೆಗೆ ಮರ ಬಿದ್ದು ಮನೆಯ ಮಾಡು ಭಾಗಶ: ಹಾನಿಯಾಗಿದೆ.ಬಿರುಸಿನ ಗಾಳಿಗೆ ಬೆಳ್ಳಾಯರು ಗ್ರಾಮದ ಅವಿನಾಶ್ ಎಂಬವರ ಮನೆಯ ಮೇಲ್ಚಾವಣಿ ಸಂಪೂರ್ಣ ಹಾನಿಯಾಗಿದೆ.ಕಿನ್ನಿಗೊಳಿ ಸಮೀಪದ ಏಳಿಂಜೆ ಗ್ರಾಮದ ಸುಂದರಿ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ.
ಸ್ಥಳಕ್ಕೆ ಉಪತಹಶೀಲ್ದಾರ್ ದಿಲೀಪ್ ರೋಡ್ಕರ್, ಕಂದಾಯ ಇಲಾಖೆ ಅಧಿಕಾರಿ ದಿನೇಶ್ ಗ್ರಾಮಕರಣಿಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ
ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಕಿನ್ನಿಗೋಳಿ ಸಮೀಪದ ಕಿಲೆಂಜೂರು, ನಡುಗೋಡು, ಪಂಜ,ಉಲ್ಯ ಪ್ರದೇಶಗಳ ನದಿ ತೀರವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
Kshetra Samachara
07/07/2022 07:54 am