ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಎಡಬಿಡದೆ ಮಳೆ ಸುರಿಯುತ್ತಿದ್ದು ಅಲ್ಪ ಸ್ವಲ್ಪ ಹಾನಿ ಸಂಭವಿಸಿದೆ.
ತಾಲೂಕು ವ್ಯಾಪ್ತಿಯ ಹಳೆಯಂಗಡಿ ಇಂದಿರಾ ನಗರದ ನೀರಿನ ಟ್ಯಾಂಕಿ ಬಳಿ ಮೈಮುನಾ ಎಂಬವರ ಮನೆಯ ಆವರಣಗೋಡೆ ಕುಸಿದು 25,000 ನಷ್ಟ ಸಂಭವಿಸಿದೆ. ಸುರೇಶ್ ದೇವಾಡಿಗ ಎಂಬವರ ಮನೆಗೆ ಹಾನಿಯಾಗಿದ್ದು 45,000 ನಷ್ಟ ಸಂಭವಿಸಿದೆ.
ತಾಲೂಕು ವ್ಯಾಪ್ತಿಯ ಕಿಲೆಂಜೂರು, ಪಂಜ, ನಡುಗೋಡು ಪ್ರದೇಶದಲ್ಲಿ ಗದ್ದೆಗೆ ನೆರೆ ನೀರು ಬಂದು ಹಾನಿ ಸಂಭವಿಸಿದೆ. ಸಂಜೆಯಾಗುತ್ತಲೆ ಸುರಿದ ಬಾರಿ ಮಳೆಗೆ, ನಡುಗೋಡು ಪ್ರದೇಶದಲ್ಲಿ ನೆರೆ ಉಂಟಾಗಿದ್ದು ಒಂದು ಕುಟುಂಬವನ್ನು ಸ್ಥಳಾಂತರಿಸಲಾಗಿದೆ.
ಕಟೀಲು,ಕಿನ್ನಿಗೋಳಿ ಹಳೆಯಂಗಡಿ ನದಿ ತೀರದ ಪ್ರದೇಶಗಳ ವಾಸಿಗಳನ್ನು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
Kshetra Samachara
05/07/2022 09:05 pm