ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಮ್ರಾಲ್: ಅಭಿವೃದ್ದಿಯೇ ಮೂಲ ಮಂತ್ರ: ಉಮಾನಾಥ್ ಕೋಟ್ಯಾನ್

ಮುಲ್ಕಿ: ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ 25 ಲಕ್ಷ ವೆಚ್ಚದಲ್ಲಿ ಕಾಫಿಕಾಡು ಯಮುನಾ ಶೆಟ್ಟಿಗಾರ್ ಮನೆ ಬಳಿಯಿಂದ ಗುಲಾಬಿ ಪೂಜಾರ್ತಿ ಮನೆಯವರೆಗೆ ರಸ್ತೆ ಅಭಿವೃದ್ಧಿಗೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭ ಅವರು ಮಾತನಾಡಿ ಅಭಿವೃದ್ಧಿಯೇ ಸರಕಾರದ ಮೂಲ ಮಂತ್ರವಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮತ್ತಷ್ಟು ಸೌಕರ್ಯಗಳನ್ನು ಒದಗಿಸಲು ಶ್ರಮಿಸಲಾಗುವುದು ಎಂದರು. ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಉಪಾಧ್ಯಕ್ಷ ಸುರೇಶ್ ಪಂಜ, ಮಾಜೀ ಅಧ್ಯಕ್ಷ ನಾಗೇಶ ಅಂಚನ್, ಬಿಜೆಪಿ ನಾಯಕರಾದ ಕಸ್ತೂರಿ ಪಂಜ, ಈಶ್ವರ ಕಟೀಲ್ ಪಂಚಾಯತ್ ಸದಸ್ಯರು, ಗುತ್ತಿಗೆದಾರ ಸುಧಾಕರ ಪೂಂಜ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/07/2022 07:27 pm

Cinque Terre

3.15 K

Cinque Terre

0