ಮುಲ್ಕಿ: ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪ್ರದೇಶವಾದ ಮುಲ್ಕಿ ಪೊಲೀಸ್ ಠಾಣೆಯ ಬಪ್ಪನಾಡು ವಾಹನ ತಪಾಸಣಾ ಕೇಂದ್ರ ಮಳೆಗೆ ಸೋರುತಿದ್ದು ಮುಲ್ಕಿ ಪೊಲೀಸರಿಗೆ ಕರ್ತವ್ಯ ನಿರ್ವಹಿಸಲು ತೀವ್ರ ತೊಂದರೆಯಾಗಿದೆ.ಮಳೆ ಬಂದರೆ ತಪಾಸಣಾ ಕೇಂದ್ರದ ಒಳಗಡೆ ಕೊಡೆ ಹಿಡಿದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. ಇದೀಗ ಕೋಣೆಯ ಮೇಲ್ಗಡೆ ತಾತ್ಕಾಲಿಕ ನೆಲೆಯಲ್ಲಿ ತರ್ಪಾಲು ಅಳವಡಿಸಲಾಗಿದೆ.
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಅರ್ಧಂಬರ್ಧ ನಡೆದಿದ್ದು ಸರ್ವಿಸ್ ರಸ್ತೆ ಕೂಡ ಇನ್ನೂ ಕಾಮಗಾರಿ ನಡೆದಿಲ್ಲ.
ತೀವ್ರ ಇಕ್ಕಟ್ಟಾದ ಪ್ರದೇಶದಲ್ಲಿ ಪೊಲೀಸ್ ತಪಾಸಣಾ ಕೇಂದ್ರ ಇದ್ದು ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ಸಾಗುವ ವಾಹನಗಳ ನಡುವೆ ಪೊಲೀಸರು ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಕೂಡಲೇ ಪೊಲೀಸ್ ವರಿಷ್ಠ ಇಲಾಖೆ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಬಪ್ಪನಾಡು ಭಾಗದಲ್ಲಿ ವ್ಯವಸ್ಥಿತವಾದ ಪೊಲೀಸ್ ತಪಾಸಣಾ ಕೇಂದ್ರ ನಿರ್ಮಿಸಬೇಕಾಗಿದೆ.
Kshetra Samachara
02/07/2022 08:48 pm