ಮುಲ್ಕಿ:ಮಹಿಳಾ ಸಬಲೀಕರಣದ ಸದುದ್ದೇಶದಿಂದ ಗ್ರಾಮೀಣ ಮಹಿಳೆಯರೇ ಆರಂಭಿಸಿದ ಜೀವನ್ಮುಖಿ ಮಹಿಳಾ ಸಹಕಾರ ಸಂಘವನ್ನು ಮಂಗಳೂರು ಡೀಡ್ಸ್ ಸಂಸ್ಥೆಯ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಸರಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಅನೇಕ ಯೋಜನೆಗಳನ್ನು ರೂಪಿಸಿದ್ದು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮುಲ್ಕಿ ಕಾರ್ನಾಡು ಬಳಿ ಅನುಪಮಾ ಸಂಕೀರ್ಣದಲ್ಲಿ 12 ಮಂದಿ ಮಹಿಳೆಯರೇ ಸಂಘವನ್ನು ಪ್ರಾರಂಭಿಸಿದ್ದು, ಉದ್ಘಾಟನೆ ಬಳಿಕ ಮುಲ್ಕಿ ಸಮುದಾಯ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದಕ ಜಿಪಂ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.
ಕಾರ್ನಾಡು ಎಸ್‌ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ಲಾವಣ್ಯ ಪ್ರಬೋದ್, ಮೂಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಸದಸ್ಯೆ ವಿಮಲಾ ಎಸ್.ಪೂಜಾರಿ, ಮಾಜಿ ಸದಸ್ಯ ಬಶೀರ್ ಕುಳಾಯಿ, ಸಂಘದ ಅಧ್ಯಕ್ಷೆ ಸುನೀತಾ, ಉಪಾಧ್ಯಕ್ಷೆ ಸಾವಿತ್ರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
Kshetra Samachara
30/05/2022 09:41 pm