ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರ ಸೇವೆಯನ್ನು ಮನಗಂಡು ವೈದ್ಯರಾದ ಡಾ. ನಂಬಿಯಾರ್ ರವರು ಪೌರ ಕಾರ್ಮಿಕರಾದ ಕೇಶವ, ಉಮೇಶ, ಆನಂದ ಕಟೀಲ್, ವಸಂತ ಹಾಗೂ ಶೇಖರ್ ರವರನ್ನು ಗೌರವಿಸಿದರು.
ಈ ಸಂದರ್ಭ ಅವರು ಮಾತನಾಡಿ ಪೌರಕಾರ್ಮಿಕರು ನಗರದ ರಾಯಭಾರಿ ಗಳಾಗಿದ್ದು ಸ್ವಚ್ಛತೆಗೆ ಶ್ರಮಿಸುವ ಅವರಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಗೌರವಕ್ಕೆ ಉತ್ತರಿಸಿ ಪೌರಕಾರ್ಮಿಕ ಕೇಶವ ಮಾತನಾಡಿ ಕಿನ್ನಿಗೋಳಿ ಪರಿಸರದಲ್ಲಿ ನಿಸ್ವಾರ್ಥ ಸೇವೆಗೈದು ಆರ್ಥಿಕವಾಗಿ ಬಡವರ ಪಾಲಿನ ಶ್ರೇಷ್ಠ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡ ಡಾ. ನಂಬಿಯಾರ್ ರವರ ಸೇವಾ ಮನೋಬಲ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.
Kshetra Samachara
07/05/2022 05:59 pm