ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರಾಗಿ ಜೀವನ್‌ರಾಂ ಸುಳ್ಯ ಆಯ್ಕೆ

ಕಾರ್ಕಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರಾಗಿ ಹಿರಿಯ ರಂಗಕರ್ಮಿ ಜೀವನ್‌ರಾಂ ಸುಳ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರಿಂದ ಅಧಿಕಾರ ಸ್ವೀಕರಿಸಿದರು.

ಜೀವನ್‌ರಾಂ ಅವರು ಹಲವು ಬಾರಿ ರಾಷ್ಟ್ರೀಯ ಮಟ್ಟದ ನಾಟಕಗಳಲ್ಲಿ ಪ್ರಶಸ್ತಿ ಪಡೆದಿದ್ದು, ಅವರ ನಿರ್ದೇಶನದ ಮಹಾಮಾಯಿ, ಪಂಜರ ಶಾಲೆ, ಧೂತವಾಕ್ಯ ಹಾಗೂ ಇನ್ನಿತರ ಹಲವು ನಾಟಕಗಳು ಜನಪ್ರಿಯವಾಗಿದೆ. ಮೂಲತ: ಯಕ್ಷಗಾನ ಕುಟುಂಬದಿಂದ ಬಂದ ಜೀವನ್‌ರಾಂ ನಾಟಕಗಳಲ್ಲಿ ಯಕ್ಷಗಾನ, ಜಾದೂ, ಜಾನಪದವನ್ನು ಅಳವಡಿಸಿದ ಜನಪ್ರಿಯ ನಿರ್ದೇಶಕರಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

09/04/2022 07:56 am

Cinque Terre

12.09 K

Cinque Terre

0

ಸಂಬಂಧಿತ ಸುದ್ದಿ