ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಎ.1 ರಿಂದ ಟೋಲ್ ಮತ್ತಷ್ಟು ದುಬಾರಿ; ಎನ್ಐಟಿಕೆ ಟೋಲ್‌ಗೇಟ್ ರದ್ದು ಅನುಮಾನ

ಸುರತ್ಕಲ್: ಸುರತ್ಕಲ್ ಟೋಲ್‌ನಲ್ಲಿ ಶುಲ್ಕ ಸಂಗ್ರಹಕ್ಕೆ ಮತ್ತೆ ಒಂದು ವರ್ಷಕ್ಕೆ ಟೆಂಡರ್ ಕರೆದಿರುವ ಮಾಹಿತಿ ಸರಕಾರದ ವೆಬ್ ಸೈಟ್ ನಲ್ಲಿ ಸರಕಾರದ ಲಭ್ಯವಾಗಿದ್ದು ಏಪ್ರಿಲ್ 1ರಿಂದ ಕರಾವಳಿ ಭಾಗದ ಆರು ಟೋಲ್ ಪ್ಲಾಜಾ ಗಳಲ್ಲಿ ಟೋಲ್ ದುಬಾರಿಯಾಗಲಿದೆ.

ಸುರತ್ಕಲ್ ಸಮೀಪದ ಎನ್ಐಟಿಕೆ ಟೋಲ್ ರದ್ದಾಗುವ ಸಾಧ್ಯತೆ ಕ್ಷೀಣಿಸಿದ್ದು ನೂತನವಾಗಿ ವರ್ಷಕ್ಕೆ 49.05 ಕೋಟಿ ರೂ. ಗಳಿಗೆ ಟೆಂಡರ್ ಆಹ್ವಾನಿಸಲಾಗಿದ್ದು, ಸೆಂಟ್ರಲ್ ಇ ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಮಾ. 23ರಂದು 6.45ಕ್ಕೆ ಹಾಕಲಾಗಿದ್ದು, ಟೆಂಡರ್ ಹಾಕಲು ದಿನಾಂಕವನ್ನು ಅದೇ ದಿನ ನಿಗದಿ ಪಡಿಸಲಾಗಿದೆ.

ಎ. 13ಕ್ಕೆ 11 ಗಂಟೆಗೆ ಟೆಂಡರ್ ಕೊನೆಗೊಳ್ಳಲಿದೆ. ಎ. 18ರಂದು ಟೆಂಡರ್ ಪರಿಶೀಲನೆ ನಡೆಯಲಿದೆ. ಎನ್‌ಎಚ್‌ಎಐನ ಕೇಂದ್ರ ಕಚೇರಿಯ, ಕೆ.ವಿ. ಸಿಂಗ್ ಎನ್ನುವ ಅಧಿಕಾರಿಯ ಸಹಿಯಲ್ಲಿ ಹೊಸ ಟೆಂಡರ್‌ ಪ್ರಕಟವಾಗಿದೆ.

ಈ ಬಾರಿ ಹೊಸ ಟೆಂಡರ್‌ನಲ್ಲಿ ಶೇ 25ರಷ್ಟು ರಿಯಾಯಿತಿ ಗೊಂದಲ ಸೃಷ್ಟಿಸಿದೆ. ಎಲ್ಲ ರೀತಿಯ ವಾಹನಗಳಲ್ಲಿ ಪ್ರಯಾಣ ಮಾಡಿದವರು 24 ತಾಸಿನಲ್ಲಿ ಮರಳಿ ಬಂದಲ್ಲಿ ರಿಯಾಯಿತಿ ನೀಡಿದ್ದು, ಮರು ಪಾವತಿ ಬಗ್ಗೆ ಸ್ಪಷ್ಟನೆಯಿಲ್ಲ. ಫಾಸ್ಟಾಗ್ ಬಳಕೆ ಮಾಡುವವರಿಗೆ ಮರುಪಾವತಿ ಹೇಗೆ ಎಂಬುದರ ಬಗ್ಗೆ ಗೊಂದಲ ಏರ್ಪಟ್ಟಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿ 60 ಕಿ.ಮೀ ನ ಅಂತರದಲ್ಲಿ ಮತ್ತೊಂದು ಟೋಲ್ ಇದ್ದರೆ ತೆಗೆಯುವುದಾಗಿ ಕಳೆದ ದಿನಗಳ ಹಿಂದೆ ಹೇಳಿದ್ದರು. ಆದರೆ ಹೇಳಿಕೆಯ ಅರ್ಥವೇ ಬೇರೆ ಎನ್ನಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ಸಂಸ್ಥೆಯು ಗುತ್ತಿಗೆ ಪಡೆದು ಕಾಮಗಾರಿ ಮಾಡಿದ್ದಲ್ಲಿ ಮಾತ್ರ ಇದು ಅನ್ವಯ ಎನ್ನಲಾಗುತ್ತಿದೆ. ತಲಪಾಡಿ ಹೆಜಮಾಡಿ ಸಾಸ್ತಾನ ನಡುವೆ ಮೂರರಲ್ಲಿ ಒಂದು ಹಾಗೂ ಬ್ರಹ್ಮರಕೊಟ್ಟು ಸುರತ್ಕಲ್ ಟೋಲ್‌ಗಳಲ್ಲಿ ಒಂದು ರದ್ದಾಗುವ ಸಂಭವವಿದೆ. ಆದರೆ ಹೊಸ ಗುತ್ತಿಗೆಗೆ ಟೆಂಡರ್‌ ಕರೆದಿರುವುದನ್ನು ಕಂಡರೆ, ಎನ್‌ಐಟಿಕೆ ಟೋಲ್ ರದ್ದಾಗುವ ಸಾಧ್ಯತೆ ಕ್ಷೀಣಿಸಿದೆ.

ಸುರತ್ಕಲ್ - ಟೋಲ್ ಬಂದ್ ಮಾಡುವಂತೆ ಇತ್ತೀಚೆಗಷ್ಟೇ ಕೆಲವು ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭ ಅದನ್ನು ರದ್ದುಗೊಳಿಸುವ ಕುರಿತಂತೆ ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಹಲವು ನಾಯಕರು ಭರವಸೆ ನೀಡಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ ಬಂದಾಗಲೂ ಮನವಿ ಸಲ್ಲಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಕರಾವಳಿಯಲ್ಲಿರುವ ಎಲ್ಲ ಆರು ಟೋಲ್ ಪ್ಲಾಜಾಗಳು ಉಳಿದಂತೆ ವಾಹನಗಳ ಸುಂಕವನ್ನು ಹೆಚ್ಚಿಸಿವೆ. ಪರಿಷ್ಕೃತ ದರಗಳು ಎಪ್ರಿಲ್ ಒಂದರಿಂದ ಜಾರಿಗೆ ಬರಲಿವೆ. ರದ್ದಾಗುತ್ತವೆ ಎಂದು ಹೇಳಲಾಗಿದ್ದ ಎನ್‌ಐಟಿಕೆ ಮತ್ತು ಬ್ರಹ್ಮರಕೂಟ್ಟು ಟೋಲ್‌ಗಳಲ್ಲಿನ ಟೋಲ್‌ ದರ ಏರಿಕೆಯಾಗಿ ಪರವಾನಿಗೆ ಪರಿಷ್ಕೃತಗೊಂಡಿದೆ.

ನವಯುಗ ಕಂಪೆನಿ ವತಿಯಿಂದ ನಡೆಯುತ್ತಿರುವ ತಲಪಾಡಿ, ಹೆಜಮಾಡಿ, ಸಾಸ್ತಾನ ಟೋಲ್ ಪ್ಲಾಜಾಗಳಲ್ಲಿಯೂ ಶೇ. 9ರಷ್ಟು ದರ ಏರಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

31/03/2022 09:14 am

Cinque Terre

13.99 K

Cinque Terre

4

ಸಂಬಂಧಿತ ಸುದ್ದಿ