ಮೂಡುಬಿದಿರೆ: ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಪುಣೆ ಹಾಗೂ ಆಯುಷ್ ಮಂತ್ರಾಲಯ, ಭಾರತ ಸರಕಾರ ಇದರ ಸಹಯೋಗದಲ್ಲಿ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವತಿಯಿಂದ ರೋಗ ಮುಕ್ತ ಭಾರತ ಅಭಿಯಾನದ ಅಂಗವಾಗಿ ಉಚಿತ ಪ್ರಕೃತಿ ಚಿಕಿತ್ಸಾ ಜಾಗೃತಿ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಕಳದ ಎಸ್‌ವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಾಗೂ ಪ್ರಾಣಾಯಾಮ ಶಿಬಿರ ನಡೆಯಿತು. ಆಳ್ವಾಸ್ ನ್ಯಾಚುರೋಪಥಿ ಕಾಲೇಜಿನ ಉಪನ್ಯಾಸಕಿ ಡಾಅಕ್ಷತಾ ಮಾಹಿತಿ ನೀಡಿದರು. ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರತಿಷ್ಠಾ ಪ್ರಾಣಾಯಾಮ ಶಿಬಿರವನ್ನು ನೆರವೇರಿಸಿದರು. ಯೋಗ ವಿಭಾಗ ದ ಡೀನ್ ಡಾ ವೃಂದಾ ಬೇಡೆಕರ್ ಶಿಕ್ಷಕರಿಗೆ ಇಮ್ಮ್ಯೂನಿಟಿ ಕಿಟ್ ವಿತರಿಸಿದರು.
ಕಾರ್ಕಳದ ಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳಿಗಾಗಿ ಏಕಾಗ್ರತೆ ಹೆಚ್ಚಿಸುವ ವಿವಿಧ ಚಟುವಟಿಕೆಗಳನ್ನು ಕಾಲೇಜಿನ ವಿದ್ಯಾರ್ಥಿಗಳ ತಂಡ ನೆರವೇರಿಸಿತು. ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಶಾಲೆಯ ಸಂಚಾಲಕರಾದ ರಘುನಾಥ ಶೆಟ್ಟಿ ಮತ್ತು ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
24/03/2022 05:36 pm