ಮುಲ್ಕಿ : ಮುಲ್ಕಿ ಸಮೀಪದಕವತ್ತಾರು ಗ್ರಾಮದ, ದೇಂದಡ್ಕ ನಿವಾಸಿ ಪೂವಪ್ಪ ಹಾಗೂ ಶಾಂತ ದಂಪತಿಗಳ ಪುತ್ರಿಯಾದ ಶ್ರುತಿ ಎಂಬುವರು ತನ್ನ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಪ್ರಸ್ತುತ ದೇರಳಕಟ್ಟೆಯ ಯೋನಪೋಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಶೃತಿ ಚಿಕಿತ್ಸೆಗಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತ್ರ ಮಂಡಳಿ,ದುರ್ಗಾ ವಾಹಿನಿ ಮುಲ್ಕಿ ಪ್ರಖಂಡದ ವತಿಯಿಂದ ಕಟೀಲು ಹಾಗೂ ಬಪ್ಪನಾಡು ದೇವಳದ ವಠಾರದಲ್ಲಿ ಸಂಗ್ರಹಿಸಿದ 50 ಸಾವಿರ ರೂಪಾಯಿ ಧನ ಸಹಾಯವನ್ನು ವಿ.ಹಿಂ.ಪ. ಜಿಲ್ಲಾ ಪ್ರಮುಖರ ಉಪಸ್ಥಿತಿಯಲ್ಲಿ ನೀಡಲಾಯಿತು.
ಧನ ಸಹಾಯ ನೀಡುವ ಕಾರ್ಯಕ್ರಮದಲ್ಲಿ ವಿ.ಹಿಂ.ಪ.ಜಿಲ್ಲಾ ಸಹ ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಸೇವಾ ಪ್ರಮುಖ್ ಪ್ರವೀಣ್ ಕುತ್ತಾರ್ , ವಿಶ್ವ ಹಿಂದೂ ಪರಿಷತ್ ಮೂಲ್ಕಿ ಪ್ರಖಂಡದ ಕಾರ್ಯದರ್ಶಿ ಶಾಮ್ ಸುಂದರ್ ಶೆಟ್ಟಿ, ಸಹಕಾರ್ಯದರ್ಶಿ ಅಶೋಕ್ ಕೆಮ್ಮಡೆ, ಮೂಲ್ಕಿ ಬಜರಂಗದಳದ ಸಂಚಾಲಕ ಅಮಿತ್ ಶೆಟ್ಟಿ.ಸಹಗೋರಕ್ಷಾ ಪ್ರಮುಖ್ ರಾಜೇಶ್ ಎಸ್.ಕೋಡಿ, ವಿಶ್ವ ಹಿಂದೂ ಪರಿಷತ್ ಕೆಮ್ಮಡೆ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ, ದುರ್ಗಾ ಪ್ರಸಾದ್, ಉಮೇಶ್, ಸಂಜಯ್, ಉಪಸ್ಥಿತರಿದ್ದರು.
Kshetra Samachara
19/10/2021 02:42 pm