ಸುರತ್ಕಲ್:ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಳೈರು ಮಧ್ಯ ಎಂ,ಅರ್,ಪಿ,ಎಲ್ ಕಾಲನಿ ಗ್ರಾಮಗಳ 2021_22 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಗ್ರಾಮ ಪಂಚಾಯತ್ ಸಮುದಾಯಭವನದಲ್ಲಿ ನಡೆಯಿತು.
ಚೇಳೈರು ಕೊಲ್ಯ ಪರಿಸರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತದೆ ರಾತ್ರಿ ವೇಳೆ ದಿನಕ್ಕೆ ಸುಮಾರು 200 ಲೋಡ್ (30 ಲಕ್ಷ ಮೌಲ್ಯದ ) ಮರಳು ಸಾಗಾಟವಾಗುತ್ತಿದೆ ಇದು ಪಂಚಾಯತ್ ಗಮನಕ್ಕೆ ಬಂದಿದೆಯಾ? ಮರಳು ಸಾಗಾಟ ಮಾಡುವುದರಿಂದ ಕುಡಿಯುವ ಬಾವಿಯ ನೀರು ಉಪ್ಪು ಅಗುತ್ತಿದೆ ಪಂಚಾಯತ್ ಅನುಮತಿ ಇಲ್ಲದೆ ಸಾಗಾಟ ಮಾಡುವ ಮರಳುಗಾರಿಕೆಯನ್ನು ತಕ್ಷಣ ನಿಲ್ಲಿಸಿ ಎಂದು ಗ್ರಾಮಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿತ್ಯಾನಂದ ಅವರನ್ನು ಗ್ರಾಮಸ್ಥರಾದ ರಮೇಶ್ ಪೂಜಾರಿ ಮತ್ತು ವೇಣುವಿನೋದ್ ಶೆಟ್ಟಿಯವರು ತರಾಟೆಗೆ ತೆಗೆದುಕೊಂಡರು ಇದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಪಂಚಾಯತ್ ನಿಂದ ಯಾರಿಗೂ ಅನುಮತಿ ನೀಡಿಲ್ಲ ಪರಿಶೇಲನೆ ಮಾಡಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಗಣಿ ಇಲಾಖೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಗ್ರಾಮ ಸಭೆಯಲ್ಲಿ ನೀರ್ಣಯ ಮಾಡಿ ಕಳುಹಿಸಲಾಗುವುದು ಎಂದರು ಹಾಗೂ ಮರಳುಗಾರಿಕೆ ನಡೆಸುವುದನ್ನು ತಕ್ಷಣ ನಿಲ್ಲಿಸುತ್ತೇವೆ ಎಂದರು.
ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಧ್ಯ ಪ್ರಗತಿನಗರ ಮತ್ತು ಮಧ್ಯ ಗುಂಡಾವು ಬಳಿ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿ ಗಳು ಅತಿಕ್ರಮಣ ಮಾಡಿದ್ದು ಇದನ್ನು ಗ್ರಾಮ ಪಂಚಾಯತ್ ಗೆ ಹಾಸ್ತಾಂತರಿಸಿ ನಿವೇಶನ ರಹಿತರಿಗೆ ನೀಡಬೇಕು ಎಂದು ಗ್ರಾಮಸ್ಥರಾದ ಪುರುಷೋತ್ತಮ ಅಗ್ರಹಿಸಿದರು ಇದಕ್ಕೆ ಗ್ರಾಮ ಕರಣಿಕ ನಿತಿನ್ ಉತ್ತರಿಸಿ ಈ ಜಾಗ ಪಂಚಾಯತ್ ಗೆ ಹಸ್ತಾಂತರ ಅಗಲಿಲ್ಲ ಈ ಬಗ್ಗೆ ಕಂದಾಯ ಇಲಾಖೆಗೆ ಮನವಿ ಬಂದಿದ್ದು ಮೇಲಿನ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು ಸರಕಾರದ ಯಾವುದೇ ಕಾಮಗಾರಿಗಳು ನಡೆಯುವಾಗ ಜಿಲ್ಲಾ ಪಂಚಾಯತ್ ಇಂಜಿನಿಯರ್ ಕಾಮಗಾರಿ ನಡೆಯುವ ಸ್ಥಳಕ್ಕೆ ಬಾರದೆ ಇರುವುದರಿಂದ ಕಳಪೆ ಕಾಮಗಾರಿಗಳು ನಡೆಯುತ್ತಿದೆ ಕೇವಲ ಅವರ ಕಚೇರಿಯಲ್ಲಿ ಕುಳಿತು ಬಿಲ್ಲು ಮಾಡುವುದಲ್ಲ ಸರಿಯಾಗಿ ಪರಿಶೀಲನೆ ಮಾಡಬೇಕು ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರದ ಜಲಜೀವನ್ ಮಿಷನ್ ಪ್ರತಿ ಮನೆಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ಮಹತ್ವದ ಯೋಜನೆ ಅದರೆ ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ ಇಂಜಿನಿಯರ್ ಅವರ ನಿರ್ಲಕ್ಷ್ಯ ಮತ್ತು ಬೇಜಾವಾದ್ದಾರಿಯಿಂದ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ ಗ್ರಾಮಸ್ಥರಿಗೆ ಉಪಯೋಗ ಅಗುವ ಹಾಗೆ ಯೋಜನೆ ನಡೆಯುತ್ತಿಲ್ಕ ಬದಲಾಗಿ ಇಂಜಿನಿಯರ್ ಹೇಳಿದ ಹಾಗೆ ನಡೆಯುತ್ತಿದೆ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಮತ್ತು ಸದಸ್ಯರುಗಳ ಮಾತನ್ನು ಇಂಜಿನಿಯರ್ ಕೇಳದಿದ್ದರೆ ಗ್ರಾಮ ಪಂಚಾಯತ್ ಬರ್ಕಾಸ್ತು ಮಾಡಿ ಅಡಳಿತ ಇಂಜಿನಿಯರ್ ನಡೆಸಲಿ ಗ್ರಾಮ ಸಭೆಗೆ ಬರಬೇಕಾದ ಇಂಜಿನಿಯರ್ ಗೈರು ಹಾಜರಾಗಿರುವ ಕಾರಣ ಎನು ಎಂದು ಗ್ರಾಮಸ್ಥರಾದ ರಮೇಶ್ ಪೂಜಾರಿ ಮತ್ತು ಪ್ರಸಾದ್ ಶೆಟ್ಟಿ ಇದಕ್ಕೆ ಉತ್ತರಿಸಿದ ನೋಡಲ್ ಅಧಿಕಾರಿ ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಗ್ರಾಮ ಸಭೆಗೆ ಜಿಲ್ಲಾ ಪಂಚಾಯತ್ ಇಂಜಿನಿಯರ್ ಬೇರೆ ಪಂಚಾಯತ್ ನಲ್ಲಿ ಗ್ರಾಮಸಭೆ ಇದ್ದಕಾರಣ ಬಾರದಿರುವುದರಿಂದ ಈ ಬಗ್ಗೆ ಜಿಲ್ಲಾ ಪಂಚಾಯತ್ ಗೆ ಇವತ್ತು ನಡೆದ ವಿಷಯದ ನೀರ್ಣಯ ಮಾಡಿ ಕಳುಹಿಸುವುದಾಗಿ ತಿಳಿಸಿದರು.
ಸರಕಾರಿ ಶಾಲೆ ಮಧ್ಯ ದಲ್ಲಿ ವಿದ್ಯಾರ್ಥಿ ಗಳ ಸಂಖ್ಯೆ 700 ಗಡಿ ದಾಟಿದ್ದು ಇಡೀ ರಾಜ್ಯಕ್ಕೆ ಮಾದರಿ ಶಾಲೆಯಾಗಿದ್ದು ಅದರೆ ಶಿಕ್ಷಕರ ಕೊರತೆ ತುಂಬಾ ಇದೆ ತಕ್ಷಣ ಶಿಕ್ಷಕರನ್ನು ನೇಮಿಸಿ ಎಂದು ಗ್ರಾಮಸ್ಥರಾದ ಪುಷ್ಪರಾಜ್ ಶೆಟ್ಟಿ ಅಗ್ರಹಿಸಿದರು ಇದಕ್ಕೆ ಉತ್ತರಿಸಿದ ಶಿಕ್ಷಣಾಧಿಕಾರಿ ಶಿಕ್ಷಕರ ವರ್ಗಾವಣೆ ಯನ್ನು ತಾಂತ್ರಿಕ ಕಾರಣದಿಂದ ನಿಂತಿದೆ ಅದರೆ ಅದು ಸರಿಯಾಗುವ ತನಕ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದರು.
ಮಧ್ಯ ಗ್ರಾಮದಲ್ಲಿ ಹೊಸದಾಗಿ ತೆರೆದ ಬೋರ ವೆಲ್ ನ ನೀರು ಕುಡಿಯಲು ಮತ್ತು ಬಟ್ಟೆ ಒಗೆಯಲು ಸಾಧ್ಯವಿಲ್ಲ ನೀರಿನ ಬಣ್ಣ ಕೆಂಪು ಇದೆ ಅ ಬೋರ್ ವೆಲ್ ನೀರು ಬೇಡಾ ಸರಕಾರದ ಹಣ ಯಾಕೆ ಹಾಳು ಮಾಡುತ್ತೀರಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಗ್ರಾಮಸ್ಥರಾದ ಚರಣ್ ಕುಮಾರ್ ಮತ್ತು ಜಯಶ್ರೀ ಅಗ್ರಹಿಸಿದರು ಇದಕ್ಕೆ ಉತ್ತರಿಸಿದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶೋದ ಮಧ್ಯ ನಂದಿನಿ ನದಿಯ ಬದಿ ತೆರೆದ ಬಾವಿ ಮತ್ತು ಓವರ ಹೆಡ್ ಟ್ಯಾಂಕ್ ಜಲಜೀವನ್ ಮಿಷನ್ ಯೋಜನೆಯಲ್ಲಿ ಸೇರಿಸಲಾಗಿದೆ. ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ ಪೂರ್ತಿ ಅದ ತಕ್ಷಣ ಸರಿಯಾದ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರಲ್ಲದೆ ಸರಕಾರದ ಪ್ರತಿಯೊಂದು ಯೋಜನೆಗೆ ಗ್ರಾಮಸ್ಥರ ಸಹಕಾರ ಅಗತ್ಯ ಕೇವಲ ಜನಪ್ರತಿನಿಧಿಗಳಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ವಿಲ್ಲ ನಿಮ್ಮಸಹಕಾರ ಅಗತ್ಯ ಎಂದರು ಅಭಿವೃದ್ಧಿ ಅಧಿಕಾರಿಯವರು ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಯಂದು ಸ್ವಚ್ಚತಾ ಅಭಿಯಾನ ನಮ್ಮ ಗ್ರಾಮ ಪಂಚಾಯತ್ ನಿಂದ ಪ್ರಾರಂಬಿಸಲಾಗುವುದು ಇಡೀ ಗ್ರಾಮ ಪಂಚಾಯತ್ ಸ್ವಚ್ಚವಾಗಿರಬೇಕೆಂಬ ಉದ್ದೇಶದಿಂದ ವಾಹನದ ಮೂಲಕ ಪ್ರತಿ ಮನೆಯ ಒಣಕಸ ಸಂಗ್ರಹವನ್ನು ಪ್ರಾರಂಭಿಸಲಾಗುವುದು ನಮ್ಮ ಗ್ರಾಮ ಪಂಚಾಯತ್ ಗೆ ಒಣಕಸ ಸಂಗ್ರಹಣ ಘಟಕಕ್ಕೆ ಸರಕಾರದಿಂದ ಚೇಳೈರು ಸ್ಮಶಾನ ಬಳಿ 60 ಸೆಂಟ್ಸ್ ಜಾಗ ಮಂಜೂರು ಆಗಿದ್ದು ಸುಮಾರು 750000 ಅನುದಾನ ಬಿಡುಗಡೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಅದನ್ನು ಪ್ರಾರಂಬಿಸಲಾಗುವುದು ಇದಕ್ಕೆ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರ ಸಹಕಾರ ಅಗತ್ಯ ಎಂದರಲ್ಲದೆ ರಾಜ್ಯ ಸರಕಾರದ ವಸತಿ ಯೋಜನೆಗೆ ನಮ್ಮ ಗ್ರಾಮ ಪಂಚಾಯತ್ ಅಯ್ಕೆಯಾಗಿದೆ ಈ ನಿಟ್ಟಿನಲ್ಲಿ ಮಧ್ಯ ಕೆಂಪುಗೆಡ್ಡೆ ಎಂಬಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ 4 ಎಕ್ರೆ ಮತ್ತು ಇತರರಿಗೆ 8-60 ಸೆಂಟ್ಸ್ ಸರಕಾರಿ ಸ್ಥಳವನ್ನು ನಿವೇಶನಕ್ಕೆ ಖಾದಿರಿಸಲಾಗಿದ್ದು ವಸತಿ ರಹಿತರ ಪಟ್ಟಿಯು ಬಹಳಷ್ಟು ಬಂದಿದ್ದು ನಿಜವಾದ ಅರ್ಹ ವಸತಿ ರಹಿತರ ಪಟ್ಟಿಯನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗುತ್ತದೆ ಅದಷ್ಟು ಶೀಘ್ರವಾಗಿ ನಿವೇಶನ ವಿತರಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ವತಿಯಿಂದ ತೆಂಗು ಬೆಳೆಯುವ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸದಸ್ಯರುಗಳಾದ ಪ್ರತಿಮಾ ಶೆಟ್ಟಿ, ರೇಖಾ,ಲತಾ,ಸುಕುಮಾರಿ, ಪ್ರೇಮಾ ಶೆಟ್ಟಿ, ದಿವ್ಯ, ಸುಮನಾ ಭಟ್,ಸುಧಾಕರ ಶೆಟ್ಟಿ, ವಸಂತಿ,ಜಯಾನಂದ,ಚರಣ್ ಕುಮಾರ್,ಕೃಷಿ ಇಲಾಖೆ ಬಶೀರ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
01/10/2021 09:46 pm