ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕಿನ್ನಿಗೋಳಿಯ ವಾರದ ಸಂತೆ ನೂತನ ಸ್ಥಳದಲ್ಲಿ ಗೊತ್ತು ಮಾಡಿದ್ದು ಗುರುವಾರ ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ನಡೆದಿದೆ.
ಕಳೆದ ಹಲವಾರು ವರ್ಷಗಳ ಹಿಂದೆ ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿ ಬದಿಯಲ್ಲಿ ವಾರದ ಸಂತೆ ನಡೆಯುತ್ತಿದ್ದು ಹೆದ್ದಾರಿ ಟ್ರಾಫಿಕ್ ಜಾಮ್ ಹಾಗೂ ಸಂತೆಗೆ ಬಂದ ಗ್ರಾಹಕರು ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ತೀವ್ರ ತೊಂದರೆ ಅನುಭವಿಸಿದ್ದರು. ಆದರೆ ಕೊರೊನಾ ಲಾಕ್ಡೌನ್ ಬಳಿಕ ವಾರದ ಸಂತೆ ನಿಲುಗಡೆ ಯಾಗಿತ್ತು.
ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ ಕಳೆದ ದಿನಗಳ ಹಿಂದೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ನೇಮಕಗೊಂಡ ಸಾಯಿಶ್ ಚೌಟ ಕಿನ್ನಿಗೋಳಿ ಪರಿಸರದ ಸಂಘಟನೆಯ ಪ್ರಮುಖರನ್ನು ಹಾಗೂ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಾರದ ಸಂತೆಯ ಸ್ಥಳವನ್ನು ಬದಲಾಯಿಸಿ ಕಿನ್ನಿಗೋಳಿ ಚರ್ಚ್ ಬಳಿಯ ನೂತನವಾಗಿ ಸ್ಥಳವನ್ನು ಗುರುತಿಸಿ ಸ್ವಚ್ಛಗೊಳಿಸಿ ವಾರದ ಸಂತೆಗೆ ಚಾಲನೆ ನೀಡಿದರು.
ಅದರಂತೆ ಗುರುವಾರ ಬೆಳಗಿನ ಹೊತ್ತು ಟ್ರಾಫಿಕ್ ಪೊಲೀಸರ ನೆರವಿನೊಂದಿಗೆ ಸ್ವಲ್ಪ ಅಡೆತಡೆಗಳನ್ನು ನಿವಾರಿಸಿ ಯಶಸ್ವಿಯಾಗಿ ವಾರದ ಸಂತೆ ನಡೆದಿದೆ. ಆದರೆ ನೂತನ ವಾರದ ಸಂತೆ ಕಿನ್ನಿಗೊಳಿ ಬಸ್ ನಿಲ್ದಾಣದಿಂದ ಸುಮಾರು ದೂರದಲ್ಲಿದ್ದು ಗ್ರಾಹಕರಿಗೆ ತೊಂದರೆಯಾಗಿ ವ್ಯಾಪಾರ ನೀರಸವಾಗಿದೆ.
Kshetra Samachara
23/09/2021 05:56 pm