ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಹಾಗೂ ತಡೆಗಟ್ಟುವಿಕೆ ಮಾಹಿತಿ ಕಾರ್ಯಾಗಾರ

ಮುಲ್ಕಿ:ಪ್ರಜ್ಞಾ ಸಲಹಾ ಕೇಂದ್ರ, ಕಂಕನಾಡಿ, ಮಂಗಳೂರು, ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆ ಆಶ್ರಯದಲ್ಲಿ,ಹಳೆಯಂಗಡಿಯ ತೋಕೂರು ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ರಿ , ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಸಮುದಾಯದಲ್ಲಾಗುವ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಹಾಗೂ ತಡೆಗಟ್ಟುವಿಕೆ ಮಾಹಿತಿ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉದಯ್ ಕುಮಾರ್ ಜ್ಯೋತಿಗುಡ್ಡೆ, ಮಾತನಾಡಿ 'ದೌರ್ಜನ್ಯಕ್ಕೊಳಗಾದ ಮಹಿಳೆಗೆ ಸಂಘ-ಸಂಸ್ಥೆಗಳು, ಸರಕಾರ, ಕುಟುಂಬವರ್ಗದವರು, ಸಮಾಜ ಯಾವ ರೀತಿಯ ಸಹಕಾರ ನೀಡಬಹುದು, ಸ್ವತಃ ಆಕೆ ಅಂತಹ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬಹುದು, ಸ್ವಾವಲಂಬಿಯಾಗಿ ಆಕೆಯು ತನ್ನ ಮುಂದಿನ ಜೀವನವನ್ನು ಯಾವ ರೀತಿ ಉತ್ತಮಗೊಳಿಸಬಹುದು, ಮಕ್ಕಳ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ನಾವು ಯಾವ ರೀತಿ ಕಾನೂನಿನ ನೆರವು ಪಡೆದುಕೊಂಡು ಕ್ರಮ ಕೈಗೊಳ್ಳಬಹುದು' ಎಂಬ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರು ಪ್ರಜ್ಞಾ ಸಲಹಾ ಕೇಂದ್ರ,ದ ಯೋಜನಾ ಸಂಯೋಜಕರಾಗಿರುವ ವಿಲಿಯಮ್ ಸ್ಯಾಮುವೆಲ್ ಮಾತನಾಡಿದರು.

ವೇದಿಕೆಯಲ್ಲಿ ಸ್ಪೋರ್ಟ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಮೋಹನ್ ದಾಸ್, ಕಾರ್ಯಾಧ್ಯಕ್ಷೆ ಶೋಭಾ ಅಂಚನ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/09/2021 01:06 pm

Cinque Terre

2.02 K

Cinque Terre

0