ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಶೆಡ್ಡೆ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಮಂಗಳೂರು: ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಿದರು

ಕೇಂದ್ರ ಮತ್ತು ರಾಜ್ಯ ಸರಕಾರದ ಜಲ್ ಜೀವನ್ ಮಿಷನ್ ಯೋಜನೆಯ ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನೀರಿನ ಟ್ಯಾಂಕ್ ಮತ್ತು ಪೈಪ್ ಲೈನ್ ವ್ಯವಸ್ಥೆ ,ಮೂಡುಶೆಡ್ಡೆ ಗ್ರಾಮದ ಕೊನೆಯ ಬಸ್ಸು ತಂಗುದಾಣದಿಂದ ತಾಲೂಕು ಪಂಚಾಯತ್ ಅನುದಾನದಲ್ಲಿ 3ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ,ಮೂಡುಶೆಡ್ಡೆ ಗ್ರಾಮದ ಮಹಾದೇವಿ ಮಂದಿರ ರಸ್ತೆ ಸಂಸದರ ನಿಧಿಯಿಂದ - 5 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟಿಕರಣ,ಮೂಡುಶೆಡ್ಡೆ ಗ್ರಾಮದ ನೇಜಿಗುರಿ ರಸ್ತೆ ಅಭಿವೃದ್ಧಿ ಸುಮಾರು 10 ಲಕ್ಷ ವೆಚ್ಚದ ಶಾಸಕರ ಪರಿಶಿಷ್ಟ ಪಂಗಡ ನಿಧಿ, ಶಾಸಕರ ನಿಧಿಯಿಂದ ಐದು ಲಕ್ಷ ವೆಚ್ಚದಲ್ಲಿ ಎದುರುಪದವು ರಸ್ತೆ ಅಭಿವೃದ್ಧಿ ,

ಶುಭೋದಯ ಶಾಸಕರ ನಿಧಿ - 5 ಲಕ್ಷ ರೂ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ, ಎಪಿಎಂಸಿ ನಿಧಿಯಿಂದ 5 ಲಕ್ಷ ರೂ ವೆಚ್ಚದಲ್ಲಿ ಮೂಡು ಮನೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ, ಉಪಾಧ್ಯಕ್ಷರಾದ ಶ್ರೀ ಅನಿಲ್ ಕುಮಾರ್, ಎಪಿಎಂಸಿ ಅಧ್ಯಕ್ಷರಾದ ಕೃಷ್ಣರಾಜ್ ಹೆಗ್ಡೆ, ಸದಸ್ಯರಾದ ವಾಣಿ ಆರ್ ಶೆಟ್ಟಿ, ರಮಾನಾಥ್ ಅತ್ತಾರ್, ಹರೀಶ್.ಕೆ, ಹರಿಪ್ರಸಾದ್ ಶೆಟ್ಟಿ, ಉಮೇಶ್.ಜೆ, ಜಯರಾಮ್ ಕೊಟ್ಟಾರಿ,ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಜಯಪ್ರಕಾಶ್. ಕೆ ಮತ್ತಿತರರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

16/08/2021 06:33 pm

Cinque Terre

2.84 K

Cinque Terre

0