ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಟ್ಟೆ:ಕ್ರೀಡೆ ಎಂಬುವುದು ಮನುಷ್ಯನಿಗೆ ಆರೋಗ್ಯ ಪೂರ್ಣ ವ್ಯಾಯಾಮವಾಗಿದೆ: ಉಮಾನಾಥ ಕೋಟ್ಯಾನ್

ಮುಲ್ಕಿ:ಕ್ರೀಡೆ ಎಂಬುವುದು ಮನುಷ್ಯನಿಗೆ ಆರೋಗ್ಯ ಪೂರ್ಣ ವ್ಯಾಯಾಮವಾಗಿದೆ,  ಕ್ರೀಡೆಯಲ್ಲಿ ತೊಡಗಿಕೊಂಡಿರುವ ವಂದೇ ಮಾತರಂ ಯುವಕ ಮಂಡಲ, ಜೋಕುಲ ಕಂಬಳ ಪಟ್ಟೆಯ ಯುವಕರ ಅನೇಕ ವರ್ಷಗಳ ಕನಸು ನನಸಾಗುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಪಟ್ಟೆಯಲ್ಲಿ ವಂದೇ ಮಾತರಂ ಯುವಕ ಮಂಡಲದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಯುವಕರು ದುರಭ್ಯಾಸಕ್ಕೆ ಬಲಿಯಾದದೆ ತಮ್ಮ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಿ ಎಂದರು.

ಏಳಿಂಜೆ ಶ್ರೀಧರ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭ ಐಕಳ ಪಂಚಾಯತ್ ಅಧ್ಯಕ್ಷೆ ಸುಗುಣ, ದಿವಾಕರ ಚೌಟ, ಈಶ್ವರ್ ಕಟೀಲ್, ಕಸ್ತೂರಿ ಪಂಜ, ವಿನೋದ್ ಬೋಳ್ಳೂರು, ಕೇಶವ ಕರ್ಕೇರ, ಅಭಿಲಾಷ್ ಶೆಟ್ಟಿ ಕಟೀಲು, ಸುನೀಲ್ ಅಳ್ವ, ಸಂಘದ ಅಧ್ಯಕ್ಷ ಯತಿರಾಜ್ ಪೂಜಾರಿ, ಪಂಚಾಯತ್ ಸದಸ್ಯರಾದ ರೇಖಾ ಶೆಟ್ಟಿ, ರವೀಂದ್ರ ಪೂಜಾರಿ ರಘರಾಮಅಡ್ಯಂತ್ತಾಯ, ಉಜ್ಜು ಪೂಜಾರ, ಬಾಸ್ಕರ ಶೆಟ್ಟಿ, ಬಾಸ್ಕರ ಪೂಜಾರಿ , ರಘುರಾಮ ಅಮೀನ್, ಸುಧೀರ್, ವಿಜಯ್ ಅಮೀನ್, ಸುರೇಶ್,  ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/09/2022 08:52 pm

Cinque Terre

1.72 K

Cinque Terre

0

ಸಂಬಂಧಿತ ಸುದ್ದಿ