ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: 'ಅನುದಾನಿತ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಸರಕಾರದಿಂದ ಆಗುತ್ತಿಲ್ಲ'

ಮುಲ್ಕಿ: ಬರವಣಿಗೆ ಹೊಸ ಹೊಳಹನ್ನು ನೀಡುತ್ತದೆ. ಓದುವಿಕೆ ಹೊಸದರೆಡೆಗೆ ಕೊಂಡೊಯ್ಯುತ್ತದೆ. ಓದುವಿಕೆಯ ಯಜ್ಞ ನಿರಂತರವಾಗಬೇಕು ಎಂದು ಕಟೀಲು ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು.

ಅವರು ಕಿನ್ನಿಗೋಳಿಯ ಪತ್ರಿಕೆ ಪ್ರಕಾಶನ ಸಂಸ್ಥೆ ಅನಂತ ಪ್ರಕಾಶದ ರಜತ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು

ಅನಂತ ಪ್ರಕಾಶ ಪುರಸ್ಕಾರವನ್ನು ಡಾ. ಹರಿಕೃಷ್ಣ ಪುನರೂರು ಅವರಿಗೆ ಶುಭವಾಗಲಿ ಅಭಿನಂದನ ಕೃತಿಯ ಸಹಿತ ಪ್ರದಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಪುನರೂರು, ಅನುದಾನಿತ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಸರಕಾರದಿಂದ ಆಗುತ್ತಿಲ್ಲ, ಮೊದಲು ಕನ್ನಡ ಶಾಲೆಗಳ ಬಗ್ಗೆ ಮುತುವರ್ಜಿ ವಹಿಸಬೇಕಾಗಿದೆ. ಇಲ್ಲದಿದ್ದರೆ ಸಾಹಿತ್ಯಕೃತಿಗಳನ್ನು ಓದುವವರು ಕನ್ನಡ ಮಾತಾಡುವವರು ಇನ್ನೂ ಕಡಿಮೆಯಾಗಲಿದ್ದಾರೆ. ಕೃತಿಗಳನ್ನು ಕೊಂಡು ಓದಿ ಸಾಹಿತಿಗಳನ್ನು ಪ್ರೋತ್ಸಾಹಿಸಬೆಕಾಗಿದೆ ಎಂದರು.

ವಿಜಯಲಕ್ಷ್ಮೀ ಕಟೀಲು ಅವರ ಶೈಕ್ಷಣಿಕ ಲೇಖನಗಳ ಕೃತಿ ಕರಿಹಲಗೆಯ ಬಿಳಿ ಅಕ್ಷರಗಳು ಕೃತಿಯನ್ನು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಪಿ. ಶ್ರೀನಾಥ್ ಹಾಗೂ ಕವನ ಸಂಕಲನ ಭೃಂಗದ ಬೆನ್ನೇರಿ ಕೃತಿಯನ್ನು ಕಟೀಲು ದೇಗುಲದ ಅರ್ಚಕ ಕಮಲಾದೇವೀಪ್ರಸಾದ ಆಸ್ರಣ್ಣ ಬಿಡುಗಡೆಗೊಳಿಸಿದರು.

ಪತ್ರಕರ್ತ ಗುರುವಪ್ಪ ಬಾಳೇಪುಣಿ ಕೃತಿಗಳ ಕುರಿತು ಮಾತನಾಡಿ, ವಿಜಯಲಕ್ಷ್ಮಿ. ತಾನು ಕಲಿಸಿದ ಶಾಲೆಯ ಮಕ್ಕಳ ಸಾಧನೆಗಳನ್ನು ಕಂಡುಕೊಂಡು ವಿದ್ಯಾರ್ಥಿಗಳೇ ತನ್ನ ಸಂಪತ್ತು ಎಂಬ ವಿಧೇಯತೆಯಿಂದ ಸುಂದರ ಬರಹಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಸಾಹಿತಿ ನಾ. ಮೊಗಸಾಲೆ ಹರಿಕೃಷ್ಣ ಪುನರೂರು ಅವರ ಅಭಿನಂದನೆ ಶುಭವಾಗಲಿ ಕೃತಿಯನ್ನು ಬಿಡುಗಡೆಗೊಳಿಸಿ ಪುನರೂರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೊಟ್ಟ ಕೊಡುಗೆ ಗಮನಾರ್ಹ. ಅಂತಹವರಿಗೆ ಅಭಿನಂದನೆ ಸ್ತುತ್ಯರ್ಹ. ಜೊತೆಗೆ ಅನೇಕ ಸಾಹಿತಿಗಳನ್ನು ಬೆಳೆಸಿದ ಕಿನ್ನಿಗೋಳಿ ಮತ್ತು ಅನಂತ ಪ್ರಕಾಶದ ಸಾಧನೆ ಕನ್ನಡ ನುಡಿ ಸೇವೆಯಲ್ಲಿ ಗಮನಾರ್ಹ ಎಂದರು.

ಲೇಖಕಿ ವಿಜಯಲಕ್ಷ್ಮೀ ಅವರನ್ನು ಗೌರವಿಸಲಾಯಿತು. ಸಾಹಿತಿ ದೇವು ಹನೆಹಳ್ಳಿ. ಅನಂತ ಪ್ರಕಾಶದ ಕೊಡೆತ್ತೂರು ಸಚ್ಚಿದಾನಂದ ಉಡುಪ ವೇದಿಕೆಯಲ್ಲಿದ್ದರು. ಗಾಯತ್ರೀ ಎಸ್. ಉಡುಪ ನಿರೂಪಿಸಿದರು.

ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಖ್ಯಾತ ಗಾಯಕಿ ನಿನಾದಾ ನಾಯಕ್ ಅವರಿಂದ ಕನ್ನಡ ಗೀತೆಗಳ ಗಾಯನ, ಹೊನ್ನಾವರ ಮುಳಕೋಡು ಯಕ್ಷಪಲ್ಲವಿ ಮಂಡಳಿಯವರಿಂದ ಚಿಂತನಾ ಹೆಗಡೆ ಭಾಗವತಿಕೆಯಲ್ಲಿ ಬಡಗುತಿಟ್ಟು ಯಕ್ಷಗಾನ ನಡೆಯಿತು.

Edited By : PublicNext Desk
Kshetra Samachara

Kshetra Samachara

28/08/2022 08:27 pm

Cinque Terre

1.88 K

Cinque Terre

0

ಸಂಬಂಧಿತ ಸುದ್ದಿ