ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೇಳೈರು:ವಿಶೇಷ ಅನುದಾನದಲ್ಲಿ ಗ್ರಾಮಾಂತರ ಪ್ರದೇಶದ ಅಭಿವೃದ್ಧಿ : ಶಾಸಕ ಉಮಾನಾಥ ಕೋಟ್ಯಾನ್

ಸುರತ್ಕಲ್:ಗ್ರಾಮಾಂತರ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಸರಕಾರದ ವಿಶೇಷ ಅನುದಾನದ ಮೂಲಕ ಅಭಿವೃದ್ಧಿ ಪಡಿಸಲಾಗುತ್ತದೆ ಸರಕಾರದ ಯೋಜನೆಗಳು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವಿನಿಯೋಗಿಸಲಾಗುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಹಳೆಯಂಗಡಿ ಸಮೀಪದ ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಧ್ಯ ಗ್ರಾಮಕ್ಕೆ ಸರಕಾರದ ವಿಶೇಷ ಅನುದಾನ 2 ಕೋಟಿ 95 ಲಕ್ಷ ರಸ್ತೆ ಕಾಂಕ್ರೀಟೀಕರಣದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಅವರು ಮಾತನಾಡಿ ಗ್ರಾಮ ಪಂಚಾಯತ್ ಸದಸ್ಯರು ಪಕ್ಷ ಭೇದ ಮರೆತು ಕೆಲಸ ಮಾಡಿದರೆ ಗ್ರಾಮ ಪಂಚಾಯತ್ ಇಡೀ ಗ್ರಾಮಕ್ಕೆ ಮಾದರಿ ಪಂಚಾಯತ್ ಅಗುವಲ್ಲಿ ಸಂದೇಹವಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಚೇಳೈರು ಗ್ರಾ ಪಂ ಅಧ್ಯಕ್ಷೆ ಯಶೋದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಭಿವೃದ್ಧಿ ಅಧಿಕಾರಿ ನಿತ್ಯಾನಂದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ಜಯಾನಂದ, ಗುತ್ತಿಗೆದಾರರಾದ ಸಿಮ್ ಲೆಸ್ ಕನ್ ಸ್ರ್ಟಕ್ಷನ್ ಮಾಲಕರಾದ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು,ಮಾಜೀ ತಾಪಂ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಪಂಚಾಯತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

26/08/2022 03:54 pm

Cinque Terre

1.76 K

Cinque Terre

0

ಸಂಬಂಧಿತ ಸುದ್ದಿ