ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಕಾಲೇಜಿನಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ. ಇನ್‌ಕ್ಯೂಬೇಷನ್ ಸೆಂಟರ್ ಫಾರ್ ಅಂಟ್ರೆಫ್ರೆನ್ಯುರಿಯಲ್ ಡೆವೆಲಪ್‌ಮೆಂಟ್ ಆಂತರಿಕ ಗುಣಮಟ್ಟ ಖಾತರಿ ಕೋಶ(ಐಕ್ಯೂಎಸಿ) ಮತ್ತು ವಾಣಿಜ್ಯ ಸಂಘದ ಸಹಯೋಗದೊಂದಿಗೆ ಉದ್ಯಮಶೀಲತಾ ಅಭಿವೃದ್ಧಿ ಕಾರ‍್ಯಕ್ರಮ ನಡೆಯಿತು.

ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಉದ್ಘಾಟಿಸಿದರು.

ಭಾರತ ಸರಕಾರದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಭಿವೃದ್ಧಿ ಸಂಸ್ಥೆಯ ಸಹಾಯಕ ನಿರ್ದೇಶಕ ಸುಂದರ ಸೇರಿಗಾರ್ ಎಂ, ಮಹಿಳಾ ಮತ್ತು ಪುರುಷ ಉದ್ದಿಮೆದಾರರಿಗೆ ಕೇಂದ್ರ ಸರಕಾರದ ವತಿಯಿಂದ ಇರುವ ಯೋಜನೆಗಳ ಮತ್ತು ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಕಟೀಲು ಕಾಲೇಜಿನ 300, ಪರಿಸರದ ವಿದ್ಯಾಸಂಸ್ಥೆಗಳಾದ ಪಾಂಪೈ ಐಕಳ, ಹಳೆಯಂಗಡಿ ಸರಕಾರಿ ಪ್ರಥಮದರ್ಜೆ ಕಾಲೇಜು, ಸುಂಕದಕಟ್ಟೆ ನಿರಂಜನ ಸ್ವಾಮೀ ಪ್ರಥಮ ದರ್ಜೆ ಕಾಲೇಜು, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜನಿಯರಿಂಗ್ ಮಿಜಾರು, ಕೆಂಜಾರು ಶ್ರೀ ದೇವೀ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲಿನ 70 ವಿದ್ಯಾರ್ಥಿಗಳು ಉದ್ಯಮಶೀಲತೆಯ ಬಗ್ಗೆ ತರಬೇತಿ ಪಡೆದರು.

ಪ್ರಾಚಾರ‍್ಯ ಡಾ. ಕೃಷ್ಣ, ಉಪನ್ಯಾಸಕರಾದ ಕಿಶನ್, ಆಶಾಕೀರ್ತಿ ಶೆಟ್ಟಿ, ವಿದ್ಯಾರ್ಥಿ ನಾಯಕರಾದ ಅನಿಕೇತ್ ಶೆಟ್ಟಿ, ಆಕಾಶ್ ಶೆಟ್ಟಿ, ವೈಷ್ಣವಿ ಶೆಟ್ಟಿ, ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ವಿಜಯ್ ವಿ. ಪ್ರಸ್ತಾವನೆಗೈದರು. ವಾಣಿಜ್ಯ ಉಪನ್ಯಾಸಕಿ ಅಕ್ಷತಾ ಶೆಟ್ಟಿ ಸ್ವಾಗತಿಸಿದರು. ಕಾವ್ಯಾ ವಂದಿಸಿದರು. ಶರಣ್ ಬಂಗೇರ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

02/06/2022 10:41 pm

Cinque Terre

2.07 K

Cinque Terre

0

ಸಂಬಂಧಿತ ಸುದ್ದಿ