ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಜಮಾಡಿ: ಬೃಹತ್ ಬೀಚ್ ಸ್ವಚ್ಛತೆ ಜಲಜಾಗೃತಿ ಅಭಿಯಾನ ತರಬೇತಿ ಕಾರ್ಯಕ್ರಮ

ಮುಲ್ಕಿ :ಮುಲ್ಕಿ ವಿಜಯ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್ ಸಿಸಿ ಘಟಕ, ರೋವರ್ಸ್ ಅಂಡ್ ರೇಂಜರ್ಸ್ ಘಟಕ, ರೆಡ್ ಕ್ರಾಸ್ ಘಟಕ ಹಾಗೂ ವಿವಿಧ ಸಂಘಟನೆಗಳ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹೆಜಮಾಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಹಾಗೂ ಯುವಜನತೆಗೆ ಜಲಜಾಗೃತಿ ಅಭಿಯಾನ ತರಬೇತಿ ಕಾರ್ಯಕ್ರಮ ಹೆಜಮಾಡಿಯ ಕಡಲ ಕಿನಾರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಮಾತನಾಡಿ ಸ್ವಚ್ಛತಾ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಭಿಯಾನಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜೋಸೆಫ್ ಜಿ ಎಂ ರೆಬೆಲ್ಲೋ, ಜಲಜಾಗೃತಿ ಕುರಿತು ಮಾಹಿತಿ ನೀಡಿದರು.

ಹೆಜಮಾಡಿ ಗ್ರಾ ಪಂ ಅಧ್ಯಕ್ಷ ಪ್ರಾಣೇಶ ಹೆಜಮಾಡಿ, ಸದಸ್ಯರಾದ ಹೇಮಾನಂದ ಪುತ್ರನ್, ಪಾಂಡುರಂಗ ಕರ್ಕೇರ ,ಲೀಲೇಶ್ ಸುವರ್ಣ, ರೇಷ್ಮಾ ಮೆಂಡನ್,ಉಡುಪಿ ನೆಹರು ಯುವ ಕೇಂದ್ರದ ಅಧಿಕಾರಿ ವಿಲ್ಫ್ರೆಡ್ ಡಿಸೋಜ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/01/2022 08:38 pm

Cinque Terre

3.66 K

Cinque Terre

0

ಸಂಬಂಧಿತ ಸುದ್ದಿ