ಮುಲ್ಕಿ ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ , ಹಳೆಯಂಗಡಿ ವಿದ್ಯಾವಿನಾಯಕ ಯುವಕ ಮಂಡಲ, ರಜತ ಸೇವಾ ಟ್ರಸ್ಟ್,ಸುವರ್ಣ ಮಹೋತ್ಸವ ಸಮಿತಿ,ಯುವತಿ ಮತ್ತು ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ಹಳೆಯಂಗಡಿಯ ವಿದ್ಯಾವಿನಾಯಕ ಯುವಕ ಮಂಡಲದ ಸಭಾಂಗಣದಲ್ಲಿ "ಕಟ್ಟಡ ಕಾರ್ಮಿಕರ ಸಮಾವೇಶ"ನಡೆಯಿತು.
ಕಾರ್ಯಕ್ರಮವನ್ನು ಭಾರತೀಯ ಮಜ್ದೂರ್ ಸಂಘದ ಹಿರಿಯ ಮುಖಂಡ ವಿಶ್ವನಾಥ ಶೆಟ್ಟಿ ಉದ್ಘಾಟಿಸಿದರು
ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ (ರಿ)ಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಕಟ್ಟಡ ಕಾರ್ಮಿಕರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ಸವಲತ್ತುಗಳನ್ನು ಒದಗಿಸುತ್ತಿದ್ದು ಕಾರ್ಮಿಕರ ಕಣ್ಣೀರು ಒರೆಸುವ ಕೆಲಸ ಆಗುತ್ತಿದೆ ಆದರೆ ಸವಲತ್ತುಗಳನ್ನು ಪಡೆಯಲು ಮಾಹಿತಿಗಳು ಅಗತ್ಯವಾಗಿದ್ದು ಕಾರ್ಮಿಕರ ಸಮಾವೇಶದ ಮೂಲಕ ಮಾಹಿತಿ ಪಡೆದು ಕಟ್ಟಕಡೆಯ ವ್ಯಕ್ತಿಯೂ ಸವಲತ್ತು ಪಡೆಯಲು ಅರ್ಹನಾಗುತ್ತಾನೆ ಎಂದರು.
ವೇದಿಕೆಯಲ್ಲಿ ಭಾರತೀಯ ಮಜ್ದೂರು ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಫೂರ್ಣೀಮಾ, ಹಳೆಯಂಗಡಿ ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷ ಯತೀಶ್ ಕೋಟ್ಯಾನ್, ಕಾರ್ಯಧ್ಯಕ್ಷ ಸುಧಾಕರ ಆಮೀನ್, ಸಂಘಟನೆಯ ವಿವಿಧ ಪದಾಧಿಕಾರಿಗಳಾದ ಸದಾಶಿವ ಅಂಚನ್, ಸ್ಟಾನಿ ಡಿಕೋಸ್ತಾ, ರೇಷ್ಮಾ, ದಿವ್ಯಶ್ರೀ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
17/10/2021 01:49 pm