ಮುಲ್ಕಿ: ಕುಟುಂಬದೊಳಗೆ ನಡೆಯುತ್ತಿರುವ ಲಿಂಗಾಧಾರಿತ ತಾರತಮ್ಯಗಳು ಕ್ರಮೇಣ ಹೆಚ್ಚುತ್ತಾ ಹಿಂಸೆಗೆ ದಾರಿ ಮಾಡಿಕೊಡುತ್ತಿದ್ದು, ಹೆತ್ತವರು ಮಕ್ಕಳ ಸರ್ವತೋಮುಖ ಬೆಳವಣೆಗೆಗಾಗಿ ಉತ್ತಮ ರೀತಿಯಲ್ಲಿ ಪಾಲನೆ ಮತ್ತು ಪೋಷಣಾ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಪತ್ರಕರ್ತ ಹಾಗೂ ತರಬೇತುದಾರ ಸಂಶುದ್ದೀನ್ ಪುತ್ತೂರು ಹೇಳಿದರು.
ಪ್ರಜ್ಞಾ ಸಲಹಾ ಕೇಂದ್ರಕಂಕನಾಡಿ ಮಂಗಳೂರು, ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತುಪ್ರವರ್ತನಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿಯೋಜನೆ, ಮಂಗಳೂರು ಗ್ರಾಮಾಂತರದ ಸಂಯುಕ್ತ ಆಶ್ರಯದಲ್ಲಿ ಮೂಲ್ಕಿ ನಗರ ಪಂಚಾಯತ್ ಸಮುದಾಯ ಭವನ ದಲ್ಲಿ ಮಂಗಳವಾರ ಜರಗಿದ "ಸಮುದಾಯದಲ್ಲಾಗುವ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ತಡೆಗಟ್ಟುವಿಕೆ" ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ ಮಕ್ಕಳಲ್ಲಿ ರೂಪಿಸಬೇಕಾದ ಸಂಸ್ಕಾರಗಳ ಬಗ್ಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಡೆಸಲ್ಪಡುವ ದೌರ್ಜನ್ಯಗಳ ವಿವಿಧ ಆಯಾಮಗಳ ಬಗ್ಗೆ ಹಲವಾರು ವಿಚಾರಗಳನ್ನು ಪ್ರಸ್ತುತ ಪಡಿಸಿದರು.
ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕ ವಿಲಿಯಂ ಸ್ಯಾಮುವೆಲ್ ಸಂಸ್ಥೆಯು ಕಾರ್ಯಗತಗೊಳಿಸುತ್ತಿರುವ ಜಾಗೃತಿ ಕಾರ್ಯಕ್ರಮಗಳು ಮತ್ತು ಮಾಹಿತಿ ಕಾರ್ಯಗಾರದ ಉದ್ದೇಶವನ್ನು ತಿಳಿಸಿದರು.
ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ,ನಗರ ಪಂಚಾಯತ್ ಸಮುದಾಯ ಸಂಘಟನಾಧಿಕಾರಿ ಮತ್ತಾಡಿ ,ಕಿರಿಯ ಆರೋಗ್ಯ ಸಹಾಯಕಿ ಅನಿತ, ಅಂಗನವಾಡಿಕಾಯಕರ್ತೆಯರು ಹಾಗೂ ಸ್ಥಳೀಯ ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
Kshetra Samachara
28/09/2021 09:31 pm