ಮುಲ್ಕಿ: ಮುಲ್ಕಿ ಸಮೀಪದ ಹಳೆಯಂಗಡಿ ಕೊಳುವೈಲು ನಿವಾಸಿ ಗಣೇಶ್ ಕೋಟ್ಯಾನ್ ಎಂಬವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತರಾಗಿದ್ದು ಶಾಸಕ ಉಮಾನಾಥ್ ಕೋಟ್ಯಾನ್ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಬಳಿಕ ಅವರು ಗಣೇಶ್ ಮೃತಪಟ್ಟ ಆವರಣವಿಲ್ಲದ ಕೆರೆಯನ್ನು ಪರಿಶೀಲಿಸಿ ಸೂಕ್ತ ತಡೆಗೋಡೆ ನಿರ್ಮಾಣದ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭ ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ಅಶೋಕ್ ಬಂಗೇರ, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ನಿರ್ದೇಶಕ ಶ್ಯಾಮ್ ಪಡುಪಣಂಬೂರು, ಮಾಜೀ ತಾಪಂ ಸದಸ್ಯ ಜೀವನ್ ಪ್ರಕಾಶ್, ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/09/2021 05:52 pm