ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಂಗಚಟುವಟಿಕೆಯಿಂದ ವಿದ್ಯಾರ್ಥಿಗಳ ಆತ್ಮಸ್ಥೆರ್ಯ ಹೆಚ್ಚುತ್ತದೆ; ಡಾ.ನಿ.ಬಿ. ವಿಜಯ

ಉಡುಪಿ: ವಿದ್ಯೆಯನ್ನು ಸ್ಪರ್ಧೆ, ಸವಾಲುಗಳ ಮಧ್ಯೆ ಪಡೆದುಕೊಳ್ಳಬೇಕಾದ ಇಂದಿನ ದಿನದಲ್ಲಿ ಕಲಿಕೆಗೆ ಮತ್ತು ಬದುಕಿಗೆ ಪೂರಕವಾದ ಅಂಶಗಳು ರಂಗಚಟುವಟಿಕೆಗಳಿಂದ ಹೆಚ್ಚುತ್ತದೆ ಎಂದು ಅಂಬಲಪಾಡಿ ಜನಾರ್ಧನ ಮಹಕಾಳಿ ದೇವಳದ ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ್‌ ನುಡಿದರು.

ಅವರು ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಹಾಗೂ ಸುಮನಸಾ

ಕೊಡವೂರು-ಉಡುಪಿ ಆಯೋಜಿಸಿದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಉತ್ತಮ ರಂಗಚಟುವಟಿಕೆಯಿಂದ ವಿದ್ಯಾರ್ಥಿಗಳ ಸಂಸ್ಕಾರದೊಂದಿಗೆ ಭೌತಿಕ, ಮಾನಸಿಕ

ಸದೃಢತೆಗೂ ಕಾರಣವಾಗುತ್ತದೆ. ಈ ನಾಟಕ ಸ್ಪರ್ಧೆಯ ಆಯೋಜನೆಗೆ ನಾಟಕ ಅಕಾಡೆಮಿ ಸದಸ್ಯರಾದ ಪ್ರದೀಪ್‌ಚಂದ್ರ ಕುತ್ಪಾಡಿಯವರ ವಿಶೇಷ ಪಾತ್ರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಹಾಗೂ ಸ್ಪರ್ಧಾಕೂಟಕ್ಕೆ ಸಂಪೂರ್ಣ ಸಹಯೋಗ ನೀಡಿರುವ ಹೆಸರಾಂತ ರಂಗತಂಡ ಸುಮನಸಾ ಕೊಡವೂರು ಬಳಗಕ್ಕೆ ಅಂಬಲಪಾಡಿ ತಾಯಿಯ ಸಾನಿಧ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಶೇಖರ್ ಕೋಟ್ಯಾನ್‌, ಸ್ಪರ್ಧಾ ಚಟುವಟಿಕೆಗಳು ಕ್ರಿಯಾಶೀಲತೆ ಮತ್ತು ಪ್ರತಿಭಾ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು. ಉಡುಪಿ ಜಿಲ್ಲೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಶಿವರಾಜ್.ಎನ್.ಕೆ, ಉದ್ಯಮಿ ಅನ್ಸ‌ರ್ ಮಲ್ಪೆ, ಎಎಫ್‌ಟಿ, ನಾಟಕ ಅಕಾಡೆಮಿ ಸದಸ್ಯ ಪ್ರದೀಪ್‌ಚಂದ್ರ ಕುತ್ಪಾಡಿ, ಮಲ್ಪೆ ಸರಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕಿ ಸಂಧ್ಯಾ, ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಉಪಸ್ಥಿತರಿದ್ದರು. ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು, ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಸ್ತಾವಿಸಿದರು. ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಧನ್ಯವಾದ ಸಲ್ಲಿಸಿದರು.

Edited By : PublicNext Desk
Kshetra Samachara

Kshetra Samachara

21/09/2022 06:27 pm

Cinque Terre

1.8 K

Cinque Terre

0

ಸಂಬಂಧಿತ ಸುದ್ದಿ