ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಾವು ಯಾವುದೇ ಪಬ್ ಅಟ್ಯಾಕ್ ಮಾಡಿಲ್ಲ; ಭಜರಂಗದಳ ಸ್ಪಷ್ಟನೆ

ಮಂಗಳೂರಲ್ಲಿ ವಿದ್ಯಾರ್ಥಿಗಳ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ರು ಎಂಬ ವಿಚಾರಕ್ಕೆ ಸಂಬಂಧಿಸಿ ಭಜರಂಗದಳ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಜರಂಗದಳ ಮುಖಂಡ ಪುನೀತ್ ಅತ್ತಾವರ, ನಿನ್ನೆ ರಾತ್ರಿ ಭಜರಂಗದಳದಿಂದ ಪಬ್ ಮೇಲೆ ದಾಳಿ ನಡೆದಿಲ್ಲ. ನಾವು ಯಾವುದೇ ಪಬ್ ಅಟ್ಯಾಕ್ ಮಾಡಿಲ್ಲ. ಆದರೆ, ಮಾಧ್ಯಮಗಳು ಪಬ್ ಅಟ್ಯಾಕ್ ಅಂತ ಬಿಂಬಿಸುತ್ತಿದೆ. ಪಾರ್ಟಿ ಮಾಡ್ತಿದ್ದ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಮಾಹಿತಿ ಬಂತು. ಮೊನ್ನೆಯ ಕಿಸ್ಸಿಂಗ್ ವೀಡಿಯೋ ವಿದ್ಯಾರ್ಥಿಗಳು, ಅಪ್ರಾಪ್ತರು ಅಲ್ಲಿದ್ರು ಎಂಬ ಮಾಹಿತಿ ಬಂತು.

ಇವರೆಲ್ಲರೂ ಫೇರ್ ವೆಲ್ ಹೆಸರಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ ಎಂಬ‌ ಮಾಹಿತಿ ಅನ್ವಯ ಭಜರಂಗದಳದವ್ರು ಹೋಗಿದ್ದು ನಿಜ. ಆದರೆ, ನಾವು ಸ್ಥಳಕ್ಕೆ ಹೋಗಿ ಪಬ್ ಮ್ಯಾನೇಜರ್, ಬೌನ್ಸರ್ ಗೆ ಅಪ್ರಾಪ್ತರು ಇದ್ದಾರೆಂಬ ಮಾಹಿತಿ ‌ನೀಡಿದ್ವಿ ನಾವು ಹೋಗುವಾಗ ಮೊದಲು ಪೊಲೀಸರಿಗೆ ಮಾಹಿತಿ ನೀಡಿದ್ವಿ, ಅವರೂ ಸಹ ಪಬ್‌ ಸ್ಥಳಕ್ಕೆ ಬಂದ್ರು.

ಪೊಲೀಸರು ಬಂದ ನಂತರ ಹುಡುಗ-ಹುಡುಗಿಯರನ್ನು ಹೊರಗೆ ಕಳಿಸಲಾಯ್ತು. ಆದರೆ, ಮಾಧ್ಯಮಗಳಲ್ಲಿ ದಾಳಿ ಎಂದು ಬರ್ತಿದೆ. ಭಜರಂಗದಳ, ವಿಶ್ವ ಹಿಂದೂ ಪರಿಷತ್ ಡ್ರಗ್ಸ್ ವಿರುದ್ಧ ಹೋರಾಡ್ತಿದೆ ಹೊರತು ನಿಜವಾಗಿ ದಾಳಿ ನಡೆದಿಲ್ಲ ಎಂದರು.

ಸ್ಥಳದಲ್ಲಿ ಹೊಡೆದಾಟ, ಹಲ್ಲೆ, ದಾಂಧಲೆ ಏನೂ‌ ನಡೆದಿಲ್ಲ. ಕಾನೂನು ಪ್ರಕಾರ ನಡೆದಿದೆ ಹೊರತು ಕಾನೂನು ವಿರುದ್ಧ ಅಲ್ಲ. ಮಂಗಳೂರಲ್ಲಿ ಡ್ರಗ್ಸ್ ದಂಧೆ ಜೋರಾಗಿದೆ. ಪಬ್ ನಡೆಸಲು ನಮ್ಮ‌ಅಭ್ಯಂತರ ಇಲ್ಲ. ಕಾನೂನು ವಿರುದ್ಧ ಪಬ್‌ ನಡೆಸುವವರ ವಿರುದ್ಧ ಕ್ರಮ‌ ಕೈಗೊಂಡು ಕಾನೂನು ವಿರೋಧಿ ಚಟುವಟಿಕೆ ನಿಲ್ಲಿಸಬೇಕೆಂದು ಕಮಿಷನರ್ ಗೆ ಒತ್ತಾಯಿಸ್ತಿದ್ದೀವಿ.

ಕಾನೂನು ವಿರೋಧಿ ಚಟುವಟಿಕೆ ವಿರುದ್ಧ ನಮ್ಮ ಹೋರಾಟ 2009ರ ದಾಳಿಗೂ ಇದಕ್ಕೂ ಸಂಬಂಧವಿಲ್ಲ. ಹಾಗೇ ಮಾಡ್ತಿದ್ರೆ ಪೊಲೀಸ್ ಇಲಾಖೆಗೆ ಮೊದಲು‌ ಮಾಹಿತಿ ನೀಡ್ತಿರಲಿಲ್ಲ ಎಂದು ದಾಳಿ ಕುರಿತು ಸ್ಪಷ್ಟನೆ ನೀಡಿದ್ದಾರೆ.

Edited By :
Kshetra Samachara

Kshetra Samachara

26/07/2022 04:50 pm

Cinque Terre

13.14 K

Cinque Terre

2

ಸಂಬಂಧಿತ ಸುದ್ದಿ