ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧ ಪಟ್ಟ ಬ್ರಹತ್ ಗಾತ್ರದ ಗೂಳಿ ನಗರವೆಲ್ಲಾ ಸಂಚರಿಸಿ ಇಲ್ಲಿನ ಹಣ್ಣು ,ತರಕಾರಿ ಅಂಗಡಿಗೆ ನುಗ್ಗಿ ಹೊಟ್ಟೆ ತುಂಬುವಷ್ಟು ತಿಂದು , ರಸ್ತೆ ಬದಿಯಲ್ಲಿ ನಿಲ್ಲಿಸಿದ ದ್ವಿಚಕ್ರ ಕಾರು ಇನ್ನಿತರ ವಾಹನವನ್ನು ಜಖಂ ಮಾಡಿದೆ.
ಇಂದಿರಾ ನಗರದ 71 ವರ್ಷದ ವಿಮಲ ನಾಯಕ್ ರನ್ನು ಕೆಡವಿ ಬಿದ್ದವರನ್ನು ಮನೆಯವರು ಲಕ್ಷಾಂತರ ರೂ. ಖರ್ಚು ಮಾಡಿದರೂ ಫಲಕಾರಿಯಾಗದೆ ಆಗಸ್ಟ 29 ರಂದು ಮೃತರಾದರು.
ರಥ ಬೀದಿಯ ಬಳಿ ವಾಸ ಮಾಡುವ 71 ವರ್ಷದ ಗೌರಿ ನಾಯಕರ ಮನೆಗೆ ನುಗ್ಗಿದ ಗೂಳಿ ಅವರನ್ನು ಕೆಡವಿದ್ದು ಹಲವು ದಿನ ಕೋಮಾ ಸ್ಥಿತಿಯಲ್ಲಿದ್ದರು. ಕೂಲಿ ಕೆಲಸ ಮಾಡಿ ಬದುಕುವ ಅವರ ಮಗ ಶಿವಾನಂದ ಲಕ್ಷಾಂತರ ರೂ ಸಾಲ ಮಾಡಿ ಚಿಕಿತ್ಸೆ ಮಾಡಿದರೂ ಫಲಕಾರಿಯಾಗದೆ ಇದೀಗ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ ಗೌರಿ ಬಾಯಿ.
ಇಂದಿರಾನಗರದ ಬಿಲ್ಲಿ ಬಾಯಿ ಎನ್ನುವ ಮಹಿಳೆ ಕೂಡಾ ಗೂಳಿಯ ಏಟು ತಿಂದು ಮನೆಯಲ್ಲಿ ನಡೆದಾಡದ ಸ್ಥಿತಿಯಲ್ಲಿದ್ದಾರೆ. ಕೆಲವು ಸಮಯದ ಹಿಂದೆ ಇಲ್ಲಿನ ಯುವಕರು ಗೂಳಿಯನ್ನು ಬಂಧಿಸಿ ಎರಡು ತಿಂಗಳು ಕಟ್ಟಿ ಸಾಕಿ ಪುನ ಬಿಡುಗಡೆಗೊಳಿಸಿದ ಬಳಿಕ ಬ್ರಹ್ಮಾವರ ರಥ ಬೀದಿ ಬಿಟ್ಟು ,ಇಂದಿರಾ ನಗರಕ್ಕೆ ಲಗ್ಗೆ ಇಟ್ಟು ಜನರೀಗೆ ತೊಂದರೆ ಕೊಡಲು ಆರಂಭಿಸಿದೆ .
ಹಿಂದೊಮ್ಮೆ ಇದರ ಸಂಚಾರ ಇಲ್ಲದಾಗ ಇಲ್ಲಿನ ಗೋ ಪ್ರೇಮಿಗಳು ಕಾಣೆಯಾದ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲು ಮಾಡಿ ಹುಡುಕಿಕೊಡುವಂತೆ ಮನವಿ ಮಾಡಿದ್ದರು.
ಹಲವಾರು ಮಂದಿಯ ಪ್ರಾಣಕ್ಕೆ ಸಂಚಕಾರ ತಂದ ಗೂಳಿಯನ್ನು ಗೋ ಸಂರಕ್ಷಕರು ಜನರಿಗೆ ತೊಂದರೆ ನೀಡುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ .
Kshetra Samachara
09/09/2022 04:46 pm