ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿಯು ಉಡುಪಿ ಜಿಲ್ಲೆ ಸಂಚಾರ ವ್ಯವಸ್ಥೆ ಮೇಲೂ ಪರಿಣಾಮ ಬೀರಿದೆ.
ಉಡುಪಿಯಿಂದ ಮಂಗಳೂರು ಕಡೆ ಹೋಗುವ ಎಲ್ಲ ಘನ ವಾಹನಗಳನ್ನು ಪಡುಬಿದ್ರೆಯಲ್ಲಿ ತಡೆದು ಕಾರ್ಕಳ ರಸ್ತೆಯ ಮೂಲಕ ಕಳಿಸಲಾಗುತ್ತಿದೆ. ಇದಕ್ಕಾಗಿ ಪಡುಬಿದ್ರೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ಬರುವ ವಾಹನ ಚಾಲಕರು ಇದು ಗೊತ್ತಿಲ್ಲದೆ ಪೊಲೀಸರೊಂದಿಗೆ ಮಾತಿನ ಚಕಮಕಿಯ ನಡೆಸಿದ ಘಟನೆಯೂ ನಡೆದಿದೆ.
ಕಾರ್ಕಳ ರಸ್ತೆಯ ಇಕ್ಕೆಲಗಳಲ್ಲಿ ಘನವಾಹನಗಳು ನಿಂತು ರಸ್ತೆ ಜಾಮ್ ಆಗಿದ್ದು, ಸಂಜೆವರೆಗೆ ವಾಹನ ಚಾಲಕರು ಇಲ್ಲೇ ತಂಗಬೇಕಾಗಿದೆ.
ಪಡುಬಿದ್ರಿ ಪಿಎಸ್ಐ ಪ್ರಕಾಶ್, ಸಾಲಿಯಾನ್ ದಿವಾಕರ್, ಹರೀಶ್, ರಾಜೇಶ್, ಹೈವೇ ಪ್ಯಾಟ್ರೋಲ್ ಮತ್ತು ಗೃಹರಕ್ಷಕ ಸಿಬ್ಬಂದಿ ಹೆದ್ದಾರಿಯಲ್ಲಿ ಬಂದೋಬಸ್ತ್ ಮಾಡುತ್ತಿದ್ದಾರೆ.
PublicNext
02/09/2022 12:48 pm