ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 4 ತಲೆಮಾರುಗಳಿಂದ ಗಣೇಶ ಮೂರ್ತಿ ತಯಾರಿ!; ಈ ಕುಟುಂಬ ನಿರ್ಮಿತ ಗಣಪನಿಗೆ ಅಮೆರಿಕದಲ್ಲೂ ಪೂಜೆ

ಬರೋಬ್ಬರಿ ನಾಲ್ಕು ತಲೆಮಾರುಗಳಿಂದಲೂ ಮಂಗಳೂರಿನ ಕುಟುಂಬವೊಂದು ಗಣಪನ ಮೂರ್ತಿ ತಯಾರಿಕೆ ಕಾಯಕದಲ್ಲಿ ತಮ್ಮನ್ನು ತೊಡಗಿಸಿದೆ! ಗಣೇಶನ ಹಬ್ಬ ಬರುತ್ತಿದ್ದಂತೆಯೇ ಈ ಮನೆಮಂದಿಯೆಲ್ಲ ಗಣಪನ ಮೂರ್ತಿ ಮಾಡುವ ಕೈಂಕರ್ಯದಲ್ಲಿ ನಿರತರಾಗುತ್ತಾರೆ. ಇವರು ಮಾಡುವ ಗಣಪನಿಗೆ ಅಮೆರಿಕದಲ್ಲೂ ಬೇಡಿಕೆಯಿದೆ.

ಹೌದು... ಮಂಗಳೂರಿನ ಮಣ್ಣಗುಡ್ಡ ನಿವಾಸಿ ರಾಮಚಂದ್ರ ರಾವ್ ಮುಂದಾಳತ್ವದಲ್ಲಿ ವರ್ಷಂಪ್ರತಿ ಗಣಪನ ಮೂರ್ತಿ ತಯಾರಿ ಕಾರ್ಯವನ್ನು ಅವರ ಮನೆಮಂದಿಯೆಲ್ಲ ಸೇರಿ ಮಾಡುತ್ತಾರೆ. ಅವರ ತಂದೆ ಮೋಹನ್ ರಾವ್ ಅವರಿಂದ ಗಣೇಶ ವಿಗ್ರಹ ತಯಾರಿ ಆರಂಭವಾಗಿದ್ದು, ಆ ಬಳಿಕ ಅವರ ನಾಲ್ವರು ಮಕ್ಕಳು, ಆ ಬಳಿಕ ಅವರ ಮಕ್ಕಳು ಇದೀಗ ಮೊಮ್ಮಕ್ಕಳು ಸೇರಿ ನಾಲ್ಕು ತಲೆಮಾರುಗಳಿಂದ ಈ ಕಾರ್ಯದಲ್ಲಿ ನಿರತವಾಗಿದೆ. ಇವರಲ್ಲಿ 9 ಇಂಚಿನ ಗಣಪನಿಂದ 10 ಅಡಿ ಎತ್ತರದ ಗಣಪ ತಯಾರಾಗುತ್ತಾನೆ.

ಈ ಬಾರಿ 235 ಗಣಪರನ್ನು ಈ ಕುಟುಂಬ ತಯಾರಿಸಿದೆ. ಬರೀ ಆವೆಮಣ್ಣು, ಬೈಹುಲ್ಲು, ಪರಿಸರ ಪೂರಕ ಬಣ್ಣ ಬಳಸಿ ಗಣಪನನ್ನು ಇವರು ತಯಾರಿಸುತ್ತಾರೆ. ಈ ಬಾರಿ 2,500 ಹಂಚಿಗಾಗುವಷ್ಟು ಆವೆಮಣ್ಣಿನಲ್ಲಿ ಗಣಪ ತಯಾರಾಗಿದ್ದಾನೆ. ಮಂಗಳೂರು ನಗರದ ಆಸುಪಾಸಿನಲ್ಲಿ ಕೂರಿಸುವ ಪ್ರಖ್ಯಾತ ಸಾರ್ವಜನಿಕ ಗಣಪನನ್ನು ಈ ಕುಟುಂಬವೇ ತಯಾರಿಸುತ್ತದೆ. ಆವೆಮಣ್ಣಿನ ಕೊರತೆಯಿದ್ದರೂ ಯಾವುದೇ ಕಾರಣಕ್ಕೆ ಪರಿಸರ ಮಾರಕ ಪರಿಕರಗಳಿಂದ ಇವರು ಗಣಪತಿಯನ್ನು ತಯಾರಿಸುವುದಿಲ್ಲ. ಆಧುನಿಕ ಕಾಲಘಟ್ಟದಲ್ಲೂ ತಲೆಮಾರುಗಳಿಂದ ಕುಟುಂಬವೊಂದು ಇಂತಹ ಕಾರ್ಯದಲ್ಲಿ ತೊಡಗಿರುವುದು ವಿಶೇಷವೇ ಸರಿ.

ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು

Edited By :
PublicNext

PublicNext

26/08/2022 07:50 pm

Cinque Terre

53.79 K

Cinque Terre

0

ಸಂಬಂಧಿತ ಸುದ್ದಿ